ಮಂಗಳೂರು: ಮಂಗಳೂರಿನ ಶಕ್ತಿ ನಗರದ ಶಕ್ತಿ ವಸತಿ ಶಾಲೆಯಲ್ಲಿ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಹಿಂದಿ ದಿವಸವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ದೀಪವನ್ನು ಬೆಳಗಿಸಿ ನಂತರ ಮಾತನಾಡಿದ ಶಕ್ತಿ ವಸತಿ ಶಾಲಾ ಪ್ರಾಂಶುಪಾಲರಾದ  ಬಬಿತಾ ಸೂರಜ್‍ ಅವರು “ಹಿಂದಿ ಬಹಳ ಸುಂದರವಾದ ಭಾಷೆ. ನಾವೆಲ್ಲರೂ ನಮ್ಮ ನಮ್ಮ ಮಾತೃ ಭಾಷೆಯೊಂದಿಗೆಇತರ ಭಾಷೆಗಳನ್ನು ಕಲಿಯುವುದು ಉತ್ತಮ. ನಾವು ಹಿಂದಿ ಭಾಷೆ ಮಾತನಾಡುವಾಗ ಮುಖ್ಯವಾಗಿ ಉಚ್ಚಾರ, ಪದಗಳ ಬಳಕೆ ಹೀಗೆ ಅತೀ ಮುಖ್ಯವಾದ ಅಂಶಗಳನ್ನು ರೂಢಿಸಿಕೊಳ್ಳಬೇಕು. 

ನಂತರ ಶಾಲಾ ಮಕ್ಕಳು ಹಿಂದಿ ದಿವಸ ಆಚರಣೆಯಕುರಿತಾಗಿ ವಿವಿಧ ಹಿಂದಿ ಪದ್ಯಗಳನ್ನು, ನೃತ್ಯಗಳನ್ನು, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ಬಗೆಗಿನ ನಾಟಕವನ್ನು ನಡೆಸಿಕೊಟ್ಟರು.

ವಿದ್ಯಾರ್ಥಿಗಳಾದ ನಿಖಿಲ್ ಸಾಯಿ ಕಾರ್ಯಕ್ರಮವನ್ನು ನಿರೂಪಿಸಿದರೆ, ಅದಿತಿ ಸ್ವಾಗತಿಸಿ ವಂದಿಸಿದರು.