ಮಂಗಳೂರು: ಬಂಟ್ವಾಳ ತಾಲೂಕಿನ ಸಮೀಪದ ಮಂಜೇಶ್ವರ ಸರಹದ್ದಿನ ಬಾಕ್ರಬೈಲ್ ನಲ್ಲಿ ಕಣಚೂರು ವೈದ್ಯಕೀಯ ಹಾಗೂ ಆಯುರ್ವೇದ ಆಸ್ಪತ್ರೆಗಳ ವತಿಯಿಂದ ಕದ್ರಿಹಿಲ್ಸ್ ಲಯನ್ಸ್ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರವು ದಿನಾಕ ಆಗಸ್ಟ್ 18 ರಂದು ಯಶಸ್ವಿಯಾಗಿ ನೆರವೇರಿತು.
ಲಯನ್ಸ್ ಅಧ್ಯಕ್ಷ ಲ. ಪ್ರಕಾಶನ್ ರವರು ದೀಪ ಬೆಳಗಿ ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಕಣಚೂರು ವೈದ್ಯಕೀಯ ಸಂಸ್ಥೆಯ ಕಿವಿ ಮೂಗು ಗಂಟಲು ತಜ್ಞ ಡಾ. ಅಶೋಕ್ ಮಾತನಾಡುತ್ತಾ ಸುಂದರ ಹಸಿರು ತಾಣದಲ್ಲಿ ನಡೆಸಿದ ಈ ಶಿಬಿರವು ಹಲವು ರೋಗಿಗಳಿಗೆ ವರದಾನವಾಗಲಿ ಎಂದರು.ಅಯುರ್ವೇದ ಆಸ್ಪತ್ರೆಯ ವೈದ್ಯಕೀಯ ಸಲಹಾ ಮುಖ್ಯಸ್ಥ ಲ.ಡಾ ಸುರೇಶ ನೆಗಳಗುಳಿಯವರು ಕಣಚೂರು ವೈದ್ಯಕೀಯ ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳನ್ನೂ ತಾವು ನೀಡಲಾಗುವ ಉಚಿತ ಆರೋಗ್ಯ ಕಾರ್ಡನ್ನೂ ಪಡೆಯಲು ಕರೆ ನೀಡಿದರು.
ಲ. ಪ್ರವೀಣ ಶೆಟ್ಟಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಲಯನ್ ಸೇವಾಸಪ್ತಾಹದ ರೂವಾರಿ ಲ. ಎನ್ ಟಿ ರಾಜ, ಲ.ರತ್ನಾಕರ ಲ.ಗೋವಿಂದ ಶರ್ಮ, ಲ.ಸಂಜೀವ ಶೆಟ್ಟಿ, ಲ ಹರಿ ಪ್ರಸಾದ್ ಲ.ಚೆನ್ನ ಕೇಶವ ಲ.ಭಾಸ್ಕರ ಶೆಟ್ಟಿ ಲ.ಜಗಜೀವನ ಶೆಟ್ಡಿ ಲ.ಸುಧಾಕರ ಶೆಟ್ಡಿಗಾರ್ ಲ.ಕೇಶವ ಭಟ್ , ಡಾ ಸೌಮ್ಯ ಅಶೋಕ್, ಡಾ ಅಂಜಲಿ, ಡಾ ಚರಣ್ ರಾಜ್, ಮತ್ತಿತರ ವೈದ್ಯರೂ ವೈದ್ಯಕೀಯ ಸಿಬಂಧಿಗಳೂ ಬಾಕ್ರಬೈಲಿನ ಶಾಲಾ ಶಿಕ್ಷಕರೂ, ಪಂಚಾಯತ್ ಅಧ್ಯಕ್ಷರೂ ಮತ್ತಿತರ ಗಣ್ಯರೂ ಭಾಗವಹಿಸಿದರು.
ಕಣಚೂರು ಯೋಜನಾಧಿಕಾರಿ ರಶೀದ್ ರವರು ಶಿಬಿರದ ವ್ಯವಸ್ಥೆಯನ್ನು ಮಾಡಿದರು. ಲ.ಎನ್ ಟಿ ರಾಜಾರವರು ಧನ್ಯವಾದ ಸಮರ್ಪಿಸಿದರು.
ಶಿಬಿರದಲ್ಲಿ ಇನ್ನೂರ ಇಪ್ಪತ್ತೈದು ರೋಗಿಗಳು ತಪಾಸಣೆ ಹಾಗೂ ಚಿಕಿತ್ಸೆ ಹಾಗೂ ಆಯುಷ್ ಕಾರ್ಡ್ ಪಡೆದರು.