ಮಂಗಳೂರು: ಮಿಲಾಗ್ರಿಸ್ ಕಾಲೇಜು, ಹಂಪನ್‍ಕಟ್ಟ, ಮಂಗಳೂರು ಕೊಂಕಣಿ ಜಾನಪದ ವಾದ್ಯ ತರಬೇತಿ ಶಿಬಿರ ತಾ. ಏಪ್ರಿಲ್ 10, 2023ರಂದು ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಮಿಲಾಗ್ರಿಸ್ ಕಾಲೇಜಿನ ಸಹಯೋಗದಲ್ಲಿ 30 ಗಂಟೆಗಳ “ಗುಮ್ಟಾಂ ಆಮ್ಜೆಂ ದಾಯ್ಜ್” ಕೊಂಕಣಿ ಜಾನಪದ ವಾದ್ಯ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಯಿತು.

ಮುಖ್ಯ ಅತಿಥಿಯಾಗಿ ದೈಜಿವರ್ಲ್ಡ್  ನಿರ್ದೇಶಕರಾದ  ಹೇಮಾಚಾರ್ಯ ಮುಖ್ಯ ಅತಿಥಿಗಳಾಗಿ ಆಗಮಿಸಿ ತಮ್ಮ ಭಾಷಣದಲ್ಲಿ ಗುಮಟ್ ತನ್ನದೇ ಆದ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಕೊಂಕಣಿ ಸಮುದಾಯದ ಸಾಂಪ್ರದಾಯಿಕ ತಾಳವಾದ್ಯವಾಗಿದೆ. ಈ ವಾದ್ಯವನ್ನು ಕೊಂಕಣಿ ಜಾನಪದ ಭಾಗವಾಗಿ ಬಳಸಲಾಗುತ್ತದೆ ಎಂದು ಅರಿವು ಮೂಡಿಸಿದರು. 

ಗೌರವ ಅತಿಥಿಯಾಗಿರುವ ಕೊಂಕಣಿ ಅಧ್ಯಯನ ಪೀಠದ ಸಂಚಾಲಕರಾದ ಡಾ ಜಯವಂತ ನಾಯಕ್ ಮಾತನಾಡಿ “ಮಿಲಾಗ್ರಿಸ್  ಕಾಲೇಜು ವಿದ್ಯಾರ್ಥಿಗಳಿಗೆ ಗುಮಟ್ ನಂತಹ  ಸರ್ಟಿಫಿಕೇಟ್ ಕೋರ್ಸ್‍ಗಳನ್ನು ನಡೆಸುತ್ತಿದೆ ಎಂದು ತಿಳಿದು ನನಗೆ ಸಂತೋಷವಾಗಿದೆ. ಇದು ನಮ್ಮ ಸಂಸ್ಕೃತಿ ಮತ್ತು ಕಲೆಯನ್ನು ಸಂರಕ್ಷಿಸಲು ಶಿಕ್ಷಣ ಸಂಸ್ಥೆಯೊಂದು ಉದಾತ್ತ ಸೂಚಕವಾಗಿದೆ. ಈ ಕೋಸ್ರ್ನಲ್ಲಿ ಭಾಗವಹಿಸಲಿರುವ ವಿದ್ಯಾರ್ಥಿಗಳನ್ನು ನಾನು ಅಭಿನಂದಿಸುತ್ತೇನೆ ಎಂದು ಹೇಳಿದರು. ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಫಾದರ್ ಮೈಕೆಲ್ ಸಾಂತುಮಾಯರ್ ಅಧ್ಯಕ್ಷತೆ ವಹಿಸಿದರು. ಮ್ಯಾಕ್ಸಿಮ್ ಸಲ್ಡಾನ್ಹಾ ಮತ್ತು ರೋಲ್ವಿನ್  ಮೊರಾಸ್, ವೇದಿಕೆಯಲ್ಲಿ ಉಪಸ್ಥಿತರಿದ್ದರು, ಶಿಬಿರ ಏಪ್ರಿಲ್ 10, 2023 ರಿಂದ ಆರಂಭಗೊಂಡಿದ್ದು ಏಪ್ರಿಲ್ 29, 2023ರವರೆಗೆ ನಡೆಯಲಾಗುವುದು.

ಕೊಂಕಣಿ ಸಂಘದ ಕಾರ್ಯದರ್ಶಿ ಡೆನ್ಸನ್ ಡಿಸಿಲ್ವಾ ಸ್ವಾಗತಿಸಿದರು. ಸಂಯೋಜಕರಾದ  ಟ್ರೆಸ್ಸಿ ಪಿಂಟೊ ವಂದಿಸಿದರು. ವಿದ್ಯಾರ್ಥಿ ಅನ್ಸನ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನಾ ಕಾರ್ಯಕ್ರಮಕ್ಕೆ ಒಟ್ಟು 125 ವಿದ್ಯಾರ್ಥಿಗಳು ಉಪಸ್ಥಿತರಿದ್ದರು.