ಮಂಗಳೂರು, ಏ.16: ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ , ಮತ್ತು ಪಾರ್ಸಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದ.ಕ ಜಿಲ್ಲೆಯಲ್ಲಿರುವ ಮೌಲಾನಾ ಆಜಾದ್ ಮಾದರಿ ಶಾಲೆಗಳಿಗೆ ಶೈಕ್ಷಣಿಕ ವರ್ಷ 2025-26ನೇ ಸಾಲಿನಲ್ಲಿ 6ನೇ ತರಗತಿಗೆ ಉಚಿತ ಪ್ರವೇಶಕ್ಕಾಗಿ “ಸೇವಾ ಸಿಂಧು ಪೋರ್ಟಲ್” ಆನ್‍ಲೈನ್ ಮೂಲಕ ಅರ್ಜಿಆಹ್ವಾನಿಸಲಾಗಿದೆ. ಇಂಗ್ಲೀಷ್ ಮೀಡಿಯಂ ರಾಜ್ಯ ಮಟ್ಟದ ಪಠ್ಯಕ್ರಮದಲ್ಲಿ ಶಿಕ್ಷಣ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಮೇ 10 ಕೊನೆಯ ದಿನ. ಎಲ್ಲಾ ಅರ್ಹ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಸೇವಾ ಸಿಂಧು ಪೋರ್ಟಲ್‍ನಲ್ಲಿ ನೇರವಾಗಿ ಲಿಂಕ್ https://sevasindhuservices.karnataka.gov.in/ ಅರ್ಜಿ ಸಲ್ಲಿಸಬಹುದು ಅಥವಾ ಹತ್ತಿರದ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆಗಳು ಮತ್ತು ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಲ್ಲಿ ಉಚಿತವಾಗಿ ಸಲ್ಲಿಸಬಹುದಾಗಿದೆ.
ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ದೊರೆಯುವ ಸೌಲಭ್ಯಗಳು:-ಪ್ರತಿ ವಿದ್ಯಾರ್ಥಿಗೆ ಉಚಿತ ಊಟದ ವ್ಯವಸ್ಥೆ ಇದೆ. ಉಚಿತವಾಗಿ ಸಮವಸ್ತ್ರ, ಬೂಟು, ಸಾಕ್ಸ್, ಪಠ್ಯ ಪುಸ್ತಕ ಮತ್ತು ಲೇಖನ ಸಾಮಾಗ್ರಿ ನೀಡಲಾಗುತ್ತದೆ. ಶಾಲೆಗಳಲ್ಲಿ ವೈದ್ಯಕೀಯ ಸೌಲಭ್ಯ ಒದಗಿಸಲಾಗುತ್ತದೆ. ಬೋಧನ ಸಲಕರಣೆ, ಕ್ರೀಡಾ ಸಾಮಾಗ್ರಿ ಒದಗಿಸಲಾಗುತ್ತದೆ.
ಮೌಲಾನಾ ಆಜಾದ್ ಮಾದರಿ ಶಾಲೆಗಳ ವಿವರ :- 1)ಮೌಲಾನಾ ಆಜಾದ್ ಹಿರಿಯ ಪ್ರಾಥಮಿಕ ಶಾಲೆ ಕುದ್ರೋಳಿ, 2)ಮೌಲಾನಾ ಆಜಾದ್ ಹಿರಿಯ ಪ್ರಾಥಮಿಕ ಶಾಲೆ ಉಳಾಯಿಬೆಟ್ಟು, 3)ಮೌಲಾನಾ ಆಜಾದ್ ಹಿರಿಯ ಪ್ರಾಥಮಿಕ ಶಾಲೆ ಗುರುಕಂಬಳ, 4)ಮೌಲಾನಾ ಆಜಾದ್ ಹಿರಿಯ ಪ್ರಾಥಮಿಕ ಶಾಲೆ ಬೋಳಿಯಾರ್, 5)ಮೌಲಾನಾ ಆಜಾದ್ ಹಿರಿಯ ಪ್ರಾಥಮಿಕ ಶಾಲೆ ಮಂಜನಾಡಿ, 6)ಮೌಲಾನಾ ಆಜಾದ್ ಶಾಲೆ ಮಲ್ಲೂರು,7)ಮೌಲಾನಾ ಆಜಾದ್ ಶಾಲೆ ಕಿನ್ಯ, 8)ಬಂಟ್ವಾಳ ಮೌಲಾನಾ ಆಜಾದ್ ಹಿರಿಯ ಪ್ರಾಥಮಿಕ ಶಾಲೆ ಮೂಲರಪಟ್ನ,9)ಬಂಟ್ವಾಳ ಮೌಲಾನಾ ಆಜಾದ್ ಹಿರಿಯ ಪ್ರಾಥಮಿಕ ಶಾಲೆ ಪುದು ಪರಂಗಿಪೇಟೆ,10)ಮೌಲಾನಾ ಆಜಾದ್ ಶಾಲೆ ಪುತ್ತೂರು, 11) ಕಡಬ ಮೌಲಾನಾ ಆಜಾದ್ ಶಾಲೆ ಕಡಬ.
ಹೆಚ್ಚಿನ ಮಾಹಿತಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ: 8277799990 ಅಥವಾ ಪಾಂಡೇಶ್ವರ ಓಲ್ಡ್‍ಕೆಂಟ್ ರೋಡ್‍ನಲ್ಲಿರುವ ಇಲಾಖೆಯ ಕಚೇರಿಯನ್ನು ಸಂಪರ್ಕಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.