ಮಂಗಳೂರು: ಕದ್ರಿ ಪಾರ್ಕ್  ಸಮೀಪದ ಅಶೋಕ ಲಯನ್ಸ್ ಸಭಾ ಭವನದಲ್ಲಿ ಗಾಂಧಿ ವಿಚಾರ ವೇದಿಕೆಯ ಆಶ್ರಯದಲ್ಲಿ ಶ್ರೀ ಯುತ ಎಂ ಜಿ ಹೆಗಡೆಯವರ ಮಿನುಗು ನೋಟ ಪುಸ್ತಕದ ಲೋಕಾರ್ಪಣೆ ಹಾಗೂ ಮಹಾತ್ಮಾ ಗಾಂಧೀಜಿಯವರ ಕುರಿತಾದ ಉಪಾನ್ಯಾಸ ಮತ್ತು ವಾದ ಕಾರ್ಯಕ್ರಮಗಳು ಜರುಗಿದುವು.

ಮಾನ್ಯ ಸುಧೀಂದ್ರ ಕುಲಕರ್ಣಿಯವರಿಂದ ಪುಸ್ತಕದ ಲೋಕಾರ್ಪಣೆಯಾಗಿ ಸುದೀರ್ಘವಾದ ಗಾಂಧೀಜಿ ಕುರಿತಾದ ಉಪಾನ್ಯಾಸ ನಡೆಯಿತು.

ಗಾಂಧೀಜಿಯವರು ಯಾವ ರೀತಿಯಲ್ಲಿ ಸರ್ವ ಜನಮಾಮನಸದ ವ್ಯಕ್ತಿ ಮಾತ್ರವಲ್ಲ‌ ಶಕ್ತಿ ಯಾಗಿದ್ದಾರೆ ಮತ್ತು ಅವರಿಂದ ಕಲಿಯ ಬೇಕಾದ ಹಲವು ಗುಣಧರ್ಮಗಳ ಕುರಿತಾಗಿ ಅವರು ಮಾತನಾಡಿದರು. ಹಾಗೂ ಮಿನುಗು ನೋಟದ ಪುಸ್ತಕದಲ್ಲಿ ಅಡಗಿರುವ ಅಂಶಗಳನ್ನು ಉಪಾನ್ಯಾಸದ ಜೊತೆ ಪೋಣಿಸಿದರು.

ಶ್ರೀಧರ ಬಿಢೆಯವರು ಗಾಂಧೀ ತತ್ವಗಳು ಯುವಜನರಲ್ಲಿ ಸಹ ಮನೆ ಮಾಡುವ ಬಗ್ಗೆ ಶ್ರಮಿಸಬೇಕು ಎಂದರು.

ತದ ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ, ಬಳ್ಳಾರಿ, ಮುಂಬೈ, ತೀರ್ಥಹಳ್ಳಿ , ಸುಳ್ಯ ಸಹಿತ ಹಲವಾರು ದೂರದೂರಿನ ಗಣ್ಯರೂ ಇತರ ಸಭಾ ಸದರೂ ಭಾಗವಹಿಸಿದರು.

ಗಾಂಧಿ ವಿಚಾರ ವೇದಿಕೆಯ ಅಧ್ಯಕ್ಷ ಶ್ರೀಧರ ಭಿಡೆ, ಉಪಾಧ್ಯಕ್ಷ ಅಣ್ಣಾ ವಿನಯಚಂದ್ರ, ಮಂಗಳೂರು ಘಟಕದ ಉಪಾಧ್ಯಕ್ಷೆ  ಬಿ.ಎಂ .ರೋಹಿಣಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಂ ಜಿ ಹೆಗಡೆ ದಂಪತಿಗಳನ್ನು ಮತ್ತು ಎಂ.ಕೆ ಸುಬ್ರಹ್ಮಣ್ಯ ಅವರನ್ನು ಈ ವೇಳೆ ಸನ್ಮಾನಿಸಲಾಯಿತು.

ಎಂ ಜಿ‌ ಹೆಗಡೆಯವರು ತಾವು ಗಾಂಧಿ ಕುರಿತಾದ ಈ ಪುಸ್ತಕ ಬರೆಯಲು ಕಾರಣವನ್ನು ವಿವರಿಸಿ ಪುಸ್ತಕದ ಅಂತರ್ಗತ ವಿಚಾರಗಳ ಮಂಥನ‌ ಮಾಡಿದರು. ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಅರವಿಂದ ಚೊಕ್ಕಾಡಿಯವರು ಈ ಕಾರ್ಯಕ್ರಮದ ರೂವಾರಿ ಹಾಗೂ ನಿರೂಪಕರಾಗಿದ್ದರು.

ಚಿರಶ್ರೀ ಉದಯಶಂಕರರಿಂದ ಗಾಂಧಿ ವಂದನ,ಭಾಗ್ಯೇಶ್ ರಿಂದ ಸ್ವಾಗತ ,ಬಿ ಎಂ ರೋಹಿಣಿಯವರಿಂದ ಧನ್ಯವಾದ ಸಮರ್ಪಣೆ ನಂತರ ಸುಭೋಜನ ಸಹಿತ ಕಾರ್ಯಕ್ರಮ ಸಂಪನ್ನವಾಯಿತು.

ಹಿರಿಯರಾದ ಕವಿ ಸುಬ್ರಾಯ ಚೊಕ್ಕಾಡಿ, ನಿವೃ ತ್ತ ಶಿಕ್ಷಕ ಪೂವಪ್ಪ, ಕಣಿಯೂರು ಮಾಜಿ ಶಾಸಕ ರಮಾನಾಥ ರೈಸೋಮಪ್ರಕಾಶ್,  ಡಾ ಜೋಸೆಫ್ ಎನ್ ಎಮ್ ಮುಂತಾದ ಹತ್ತು ಹಲವು ಗಣ್ಯರು ಉಪಸ್ಥಿತರಿದ್ದರು.

ಎಲ್ಲರೂ ಗಾಂಧೀ ಟೋಪಿ ಧರಿಸಿದ್ದುದು ಔಚಿತ್ಯ ಪೂರ್ಣವಾಗಿತ್ತು.