ಮಂಗಳೂರು: ಕೊಂಕಣಿ ಮಾತೃಭಾಷೆ ಜನರು ಕರ್ನಾಟಕ, ಗೋವ, ಕೇರಳ ಮಹಾರಾಷ್ಟ್ರ ರಾಜ್ಯದ ವಿವಿಧೆಡೆ ಇದ್ದು ಆಖಿಲ ಭಾರತ ಸಾಹಿತ್ಯ ಸಮ್ಮೇಳನ ಅವರನ್ನು ಗೋವಾದ ಮಡ್ಗಾಂವ್ ರವೀಂದ್ರ ಕಲಾಕ್ಷೇತ್ರದಲ್ಲಿ ಅಕ್ಟೋಬರ್ 26,27 ಒಟ್ಟು ಮಾಡಲಿದೆ ಎಂದು ‌ಆಖಿಲ ಭಾರತ ಕೊಂಕಣಿ ಪರಿಷತ್ತಿನ ಕಾರ್ಯಧ್ಯಕ್ಷ ಚೇತನ್ ಆಚಾರ್ಯ ನುಡಿದರು.

ಅವರು ಮಂಗಳೂರು ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಇದರ ಸಭೆಯಲ್ಲಿ ಸಮ್ಮೇಳನದ ಮೊದಲ ನೋಂದಣಿ ಹಿರಿಯ ಕೊಂಕಣಿ ಕಾರ್ಯಕರ್ತೆ ಗೀತಾ‌ ಕಿಣಿ ಅವರು‌ ಮಾಡಿದ್ದನ್ನು ಸ್ವೀಕರಿಸಿ ‌ಮಾತನಾಡಿದರು.

ಪ್ರದೇಶದ ಪ್ರಭಾವ ಭಾಷೆಯ ಮೇಲೆ ಇದೆ ಅದರೂ ಮಾತೃಭಾಷೆ ಹೃದಯದಿಂದ ಅರ್ಥವನ್ನು ಮಾಡಿಸುತ್ತದೆ ಎಂದು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಗೋವಾದ ಚಳುವಳಿಯ ಹಿರಿಯ ಪ್ರಶಾಂತ್ ನಾಯಕ್ ನುಡಿದರು.

ಈ ಬಾರಿಯ ಸಮ್ಮೇಳನದಲ್ಲಿ ಯುವಜನರಿಗೆ ವಿಶೇಷ ಅವಕಾಶಗಳನ್ನು ನೀಡಲು ಎರಡು ದಿನಗಳ ನೋಂದಣಿ ಅವರಿಗೆ ಕೇವಲ ನೂರು ರೂಪಾಯಿ ಆಗಿದೆ ಎಂದು ಹೇಳಿದರು.

ಕೆಬಿಎಮ್‌ಕೆ ಆಧ್ಯಕ್ಷ ಕೆ ವಸಂತ ರಾವ್ ಸ್ವಾಗತಿಸಿ ಕಾರ್ಯದರ್ಶಿ ರೇಮಂಡ್ ಡಿಕೂನಾ ತಾಕೊಡೆ ವಂದಿಸಿದರು. ಖಜಾಂಚಿ ಸುರೇಶ ಶೆಣೈ ವೇದಿಕೆಯಲ್ಲಿ ಇದ್ದರು.