ಮಂಗಳೂರು: ಶಕ್ತಿನಗರದ ಶಕ್ತಿ ಪ.ಪೂ ಕಾಲೇಜಿನ ವಿಜ್ಞಾನ ವಿಭಾಗ ಮತ್ತು ವಾಣಿಜ್ಯ ವಿಭಾಗದಲ್ಲಿ ರಾಜ್ಯಮಟ್ಟದ ಪಪೂ ಪರೀಕ್ಷೆಯಲ್ಲಿ 4 ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಶಕ್ತಿ ಪಪೂ ಕಾಲೇಜಿನ ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು. 

ವಾಣಿಜ್ಯ ವಿಭಾಗದಲ್ಲಿ ಸಾಧನೆ ಮಾಡಿ 99.16% ಅಂಕ ಪಡೆದು ಸಾಧನೆ ಮಾಡಿರುವ ರಿಚಾ ಗಣೇಶ್‍ ದಾಲ್ವಿಯವರು ಆನ್‍ಲೈನ್ ಮೂಲಕ ಭಾಗವಹಿಸಿ ಶಕ್ತಿ ಪ.ಪೂ ಕಾಲೇಜಿನ ಶಿಕ್ಷಕ ವೃಂದದ ಶ್ರಮವನ್ನು ಶ್ಲಾಘಿಸಿದರು. 98.66% ಅಂಕ ಪಡೆದಿರುವ ನೈದಿಲೆಯವರನ್ನು, 98.50% ಪಡೆದಿರುವ ವಿಜ್ಞಾನ ವಿಭಾಗದ ಸ್ಟೀವ್ ಜೆಪ್ ಲೋಬೋ, 98.33% ಅಶ್ವಥ್‍ ಅಜಿತ್ ಪೈ ಅವರನ್ನು ಸಾಲು ಹೋದಿಸಿ, ನೆನಪಿನ ಕಾಣಿಕೆ ನೀಡಿ ಸಂಸ್ಥೆಯ ಸಂಸ್ಥಾಪಕರಾದ ಡಾ.ಕೆ.ಸಿ.ನಾೈಕ್ ಸನ್ಮಾನಿಸಿದರು. 

ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಎಲ್ಲಾ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. 

ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಮಾತನಾಡಿ ಶಕ್ತಿ ಪ.ಪೂ ಕಾಲೇಜು ಕಳೆದ 6 ವರ್ಷಗಳಲ್ಲಿ ಮೂರು ವರ್ಷಗಳ ಕಾಲ ನಿರಂತರ ರಾಜ್ಯಮಟ್ಟದಲ್ಲಿ ರ್ಯಾಂಕ್‍ನ್ನು ಗಳಿಸುತ್ತಾ ಬರುತ್ತಿದ್ದೆ. ಶಕ್ತಿ ಪ.ಪೂ ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳು ಉತ್ತಮವಾದ ಅಂಕವನ್ನು ಪಡೆಯುವಂತಾಗಲು ತುಂಬಾ ಶ್ರಮ ಪಟ್ಟಿರುತ್ತಾರೆ. ಈ ಸಂದರ್ಭದಲ್ಲಿ ಉತ್ತಮ ಅಂಕ ಪಡೆದಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದ್ದರು. 

ಸಂಸ್ಥೆಯ ಸಂಸ್ಥಾಪಕರಾದ ಡಾ.ಕೆ.ಸಿ. ನಾೈಕ್ ಮಾತನಾಡಿ ಶಕ್ತಿ ಪ.ಪೂ ಕಾಲೇಜಿನ 4 ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ರ್ಯಾಂಕ್ ಪಡೆದು ಸಾಧನೆ ಮಾಡಿರುವುದು ನಿಜಕ್ಕೂ ಶ್ಲಾಘನೀಯವಾದ ಸಾಧನೆಯಾಗಿದೆ. ನಾನು ಸಂಸ್ಥೆ ಪ್ರಾರಂಭ ಮಾಡುವಾಗ ಈ ತರದ ಕನಸು ಕಂಡಿದೆ. ಇದು ಈ ಸಂದರ್ಭದಲ್ಲಿ ಸಾಕಾರವಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಸ್ಪರ್ದಾತ್ಮಕ ಪರೀಕ್ಷೆಯಲ್ಲಿಯು ಈ ತರದ ರ್ಯಾಂಕ್‍ನ ನಿರೀಕ್ಷೆ ಮಾಡುತ್ತಿದ್ದೇನೆ. ಇದು ಸಾಕಾರವಾಗುವ ದಿನಗಳು ಹತ್ತಿರದಲ್ಲಿದೆ ಎಂದು ನಾನು ಭಾವಿಸುತ್ತೇನೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಿಹಿಹಂಚಿ ಖುಷಿಯನ್ನು ವ್ಯಕ್ತ ಪಡಿಸಿದರು. 

ವೇದಿಕೆಯಲ್ಲಿ ಶಕ್ತಿ ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿ, ಶಕ್ತಿ ರೆಸಿಡೆನ್ಸಿಯಲ್ ಶಾಲೆ ಪ್ರಾಂಶುಪಾಲೆ ಬಬಿತಾ ಸೂರಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.