ಭಟ್ರಕುಮೇರು: ನಗರದ ಪದವಿನಂಗಡಿ ಸಮೀಪದ ಭಟ್ರಕುಮೇರು ಸ್ವಾಮಿ ಕೊರಗ ತನಿಯ ಸಾನಿಧ್ಯದಲ್ಲಿ ಸ್ವಾಮಿ ಕೊರಗ ತನಿಯ ದೈವದ ತೃತೀಯ ವರ್ಷದ ಪ್ರತಿಷ್ಠಾವರ್ಧಂತಿ ಹಾಗೂ ಕೋಲ ಸೇವೆಯು ಸಾನಿಧ್ಯದ ಯಜಮಾನರು ಹಾಗೂ ದೈವಾರಾಧಕರಾದ ಭಾಸ್ಕರ ಬಂಗೇರ ಇವರ ನೇತ್ರತ್ವದಲ್ಲಿ ಇದೇ ಬರುವ ಡಿ. 8 ಅದಿತ್ಯವಾರದಂದು ಬೆಳಿಗ್ಗೆ 6 ಗಂಟೆಗೆ ತಂತ್ರಿಗಳಾದ ರವಿ ಆನಂದ ಶಾಂತಿ ಆಡುಮರೋಳಿ ಇವರ ಮಾರ್ಗದರ್ಶನದಲ್ಲಿ ಜರುಗಲಿದೆ.
ಅಂದು ಬೆಳಿಗ್ಗೆ 6ರಿಂದ ಪಂಚಗವ್ಯಶುದ್ಧಿ, ಸ್ವಸ್ತಿಪುಣ್ಯಹ, ಮಹಾಗಣಪತಿ ಹೋಮ ಸಾನಿಧ್ಯಕಲಶ, ಪ್ರಸನ್ನ ಸೇವೆ ಹಾಗೂ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಗಂಧಕಾಡು ಇವರಿಂದ ಭಜನ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ಸ್ವಾಮಿ ಕೊರಗ ತನಿಯ ದೈವದ ಕೋಲ ಸೇವೆ ಜರುಗಲಿದೆ. ಮಧ್ಯಾಹ್ನ 12.30ಕ್ಕೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ.
ಮಧ್ಯಾಹ್ನ 1 ಗಂಟೆಯಿಂದ ವಿಜಯ ಭಾಸ್ಕರ್ ಮತ್ತು ಗಣೇಶ್ ಮಂಗಳೂರು ಇವರಿಂದ "ಭಕ್ತಿಗಾನ ಸುಧೆ" ಸಂಜೆ 4 ಗಂಟೆಯಿಂದ "ಸ್ಪೂರ್ತಿ ಮಹಿಳಾ ಭಜನಾ ಮಂಡಳಿ" ಪದವಿನಂಗಡಿ ಮತ್ತು ಶ್ರೀ ನಾರಾಯಣಗುರು ಸೇವಾಸಂಘ, ಮೇರಿಹಿಲ್, ಗುರುನಗರ ಇವರಿಂದ " ಭಜನೆ ಹಾಗೂ ಹರಿನಾಮ ಸಂಕೀರ್ತನೆ ನಡೆಯಲಿದೆ. ಸಂಜೆ 7 ಗಂಟೆಗೆ ಅಗೆಲು ಸೇವೆ ನಡೆಯಲಿದ್ದು, ಬಳಿಕ ಅನ್ನಸಂತರ್ಪಣೆ ನೆರವೇರಲಿದೆ.
ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕರಿಗಂಧ ಸ್ವಿಕರಿಸಿ, ಸ್ವಾಮಿ ಕೊರಗ ತನಿಯ ದೈವದ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಕ್ಷೇತ್ರದ ಸೇವಾಕರ್ತರುಗಳಾದ ಪೂಜ್ಯ ಮಾತಶ್ರೀ ವಿಮಲಾ ಹಾಗೂ ವಿಜಯ ಭಾಸ್ಕರ ಬಂಗೇರ ಇವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.