ಮಂಗಳೂರು: ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ವಿಭಾಗದಿಂದ ನಿವೃತ್ತಿಯಾಗುತ್ತಿರುವ ಮಂಗಳೂರು ವಿವಿಯ ಕುಲಪತಿಯೂ ಆಗಿರುವ ಪ್ರೊ.ಪಿ.ಎಲ್.ಧರ್ಮ ಅವರನ್ನು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರ ವತಿಯಿಂದ ಮಂಗಳಗಂಗೋತ್ರಿಯ ಆಡಳಿತ ಭವನದ ಕುಲಪತಿಗಳ ಕಛೇರಿಯಲ್ಲಿ ಶುಕ್ರವಾರ ಬೀಳ್ಕೊಡಲಾಯಿತು. 

ಸಿಂಡಿಕೇಟ್ ನ  ಸರ್ವ ಸದಸ್ಯರು, ಕುಲಸಚಿವರು, ಕುಲಸಚಿವ (ಪರೀಕ್ಷಾಂಗ), ಡೀನ್ ಗಳು, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಆಡಳಿತ ಸಿಬ್ಬಂದಿ ಉಪಸ್ಥಿತರಿದ್ದರು.