ಮಂಗಳೂರು ಜ. 21: ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯಾದ ಶಾಸ್ತ ನಾೈಕ್ ಮತ್ತು 5ನೇ ತರಗತಿಯ ವಿದ್ಯಾರ್ಥಿಯಾದ ಶ್ರೆಷ್ಠ ನಾೈಕ್‍ ಬೆಂಗಳೂರಿನಲ್ಲಿ ನಡೆದ ಭಾರತೀಯ ವಿಜ್ಞಾನ ಮತ್ತು ಇಂಜಿನಿಯರಿಂಗ್‍ ಫೇರ್ INSEF ಈ ನ್ಯಾಷ್‍ನಲ್  ಫೇರ್ 2025)ನಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಈ ಅತ್ಯುತ್ತಮ ಸಾಧನೆಯು ಶಾಸ್ತ ನಾೈಕ್‍ಗೆ ಅಮೆರಿಕಾದಲ್ಲಿ ನಡೆಯುವ ಪ್ರತಿಷ್ಠಿತ ಜೀನಿಯಸ್‍ ಒಲಂಪಿಯಾಡ್‍ನಲ್ಲಿ ಪ್ರವೇಶವನ್ನು ಪಡೆದಿದ್ದಾನೆ.

ನವೆಂಬರ್‍ನಲ್ಲಿ ಇನ್ನೋವೇಟಿವ್‍ ಇಂಟರ್‍ನ್ಯಾಶನಲ್ ಸ್ಕೂಲ್ ಬೆಂಗಳೂರಿನಲ್ಲಿ ನಡೆದ ಸಿಬಿಎಸ್‍ಇ ಪ್ರಾದೇಶಿಕ ಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆ 2024ರ ಸ್ಪರ್ಧೆಯಲ್ಲಿ ಶಾಸ್ತಾ ನಾೈಕ್‍ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆಯುವುದರೊಂದಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದರು ಹಾಗೂ 2024 ರ ನವೆಂಬರ್ 13 ರಿಂದ 16 ರವರೆಗೆ ರಾಜಸ್ಥಾನದ ಜೈಪುರದಲ್ಲಿ ನಡೆದ ಅಖಿಲ ಭಾರತಿ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಭಾಗವಹಿಸಿ  ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.

ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ. ಸಿ. ನಾೈಕ್, ಕಾರ್ಯದರ್ಶಿ ಸಂಜಿತ್ ನಾೈಕ್. ಪ್ರಧಾನ ಸಲಹೆಗಾರರಾದ  ರಮೇಶ್ ಕೆ. ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿ ಹೆಚ್ ಮತ್ತು ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆಯಾದ ಬಬಿತಾ ಸೂರಜ್ ಶುಭಹಾರೈಸಿದರು.