ಇಸ್ರೇಲಿನ ಇಲಾಟ್‌ನಲ್ಲಿ ನಡೆದ 70ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತದ ಚಂಡೀಗಡದ 20ರ ಪ್ರಾಯದ ಹರ್ನಾಜ್ ಕೌರ್ ಸಂಧು ಭುವನ ಸುಂದರಿಯಾಗಿ ಆಯ್ಕೆಯಾದರು.

1996ರಲ್ಲಿ ಸುಸ್ಮಿತಾ ಸೇನ್, 2000ದಲ್ಲಿ ಲಾರಾ ದತ್ತಾ ಭುವನ ಸುಂದರಿ ಆಗಿದ್ದರು. 21 ವರುಷಗಳ ಬಳಿಕ ಭಾರತಕ್ಕೆ ಭುವನ ಸುಂದರಿ ಪಟ್ಟ ತಂದಿದ್ದಾರೆ ಹರ್ನಾಜ್.

ಪರಾಗ್ವೆಯ ನಾಡಿಯಾ ಪೆರೆರಾ ಎರಡನೆಯ ಮತ್ತು ದಕ್ಷಿಣ ಆಫ್ರಿಕಾದ ಲಲೇಲಾ ಸ್ಟಾನ್ ಮೂರನೆಯ ಸ್ಥಾನ ಪಡೆದರು.