ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಸ್ಥಳೀಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ನಡೆಯುತ್ತಿರುವ ಆರು ದಿನಗಳ ಆಳ್ವಾಸ್ ವಿರಾಸತ್ 2024 ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದಲ್ಲಿ ಡಿಸೆಂಬರ 11ರಂದು ಧಾರವಾಡದ ಪ್ರಖ್ಯಾತ ಹಿಂದೂಸ್ತಾನಿ ಗಾಯಕ ಪದ್ಮಶ್ರೀ ಪಂಡಿತ್ ವೆಂಕಟೇಶ ಕುಮಾರ್ ಅವರಿಗೆ 2024ನೇ ಸಾಲಿನ ಆಳ್ವಾಸ್ ವಿರಾಸತ್ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.
ಮೂಡುಬಿದಿರೆ ಕುತ್ತಿಗೆಯ ವಿವೇಕಾನಂದ ನಗರದ ವನಜಾಕ್ಷಿ ಶ್ರೀಪತಿ ಭಟ್ ಬಯಲು ರಂಗ ಮಂದಿರದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದರು. ಗೋಧೂಳಿ ಸಮಯದಲ್ಲಿ ನಡೆದ ಸಮಾರಂಭವನ್ನು ಮೆಚ್ಚಿ ಮಾತನಾಡಿದ ವೆಂಕಟೇಶ್ ಕುಮಾರ್ ಅವರು ಪ್ರಶಸ್ತಿಗೆ ಕೃತಜ್ಞತೆ ಚಿಕ್ಕಂದಿನಲ್ಲಿ ನನ್ನಂತಹ ಬಡ ಮಕ್ಕಳನ್ನು ಆದರಿಸಿ, ಉಚಿತ ಊಟ ತಿಂಡಿ ನೀಡಿ ಬೆಳೆಸಿದ ಕಣ್ಣಿಲ್ಲದ ಪರಮಪೂಜ್ಯ ಪುಟ್ಟರಾಜ ಗವಾಯಿ ಹಾಗೂ ಪಂಚಾಕ್ಷರಿ ಗವಾಯಿ ಅವರನ್ನು ಸ್ಮರಿಸಿ ಪ್ರಶಸ್ತಿಯನ್ನು ಅವರ ಚರಣಾರವಿಂದಗಳಿಗೆ ಅರ್ಪಿಸಿದರು. ಸಮಯ, ಶಿಸ್ತು, ಸಮಯಮಕ್ಕೆ ಬೆಲೆ ಕೊಡುವ ಆಳ್ವ ರ ಕಾರ್ಯಕ್ರಮಗಳಿಗೆ ಪ್ರಣಾಮವನ್ನು ಸಲ್ಲಿಸಿದರು.
ವೇದಿಕೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪಿ ಎಲ್ ಧರ್ಮ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಂಜುನಾಥ್, ಭಾರತ್ ಸ್ಕೌಟ್ಸ್ ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತ ಪಿ ಜಿ ಆರ್ ಸಿಂಧ್ಯಾ, ಮಾಜಿ ಶಾಸಕ ಗಣೇಶ್ ಕಾರ್ಣಿಕ್, ಉದ್ಯಮಿ ಶ್ರೀಪತಿ ಭಟ್, ನಾರೇನ್ ನಾಯಕ್, ಕರಣ ಬೆಳಗೆರೆ ಹಾಜರಿದ್ದರು. ವೇಣುಗೋಪಾಲ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ತರುವಾಯ ತರುವಾಯ ವೆಂಕಟೇಶ್ ಕುಮಾರ್ ಬಳಗದವರ ಹಿಂದುಸ್ತಾನಿ ಗಾಯನ ಕಾರ್ಯಕ್ರಮ ನಡೆಯಿತು.