ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಪುರಸಭೆಯ ಉತ್ತರ ಭಾಗದಲ್ಲಿರುವ ಅಲಂಗಾರು ಆಶ್ರಯ ಕಾಲೋನಿ ರಸ್ತೆ ಅತ್ಯಂತ ಕಳಪೆ ಕಾಮಗಾರಿಯ ಸಿಮೆಂಟ್ ರಸ್ತೆಗೆ ಉದಾಹರಣೆಯಾಗಿದೆ. ಕಳೆದ ಒಂದು ವರ್ಷಗಳಿಂದ ಈ ಭಾಗದ ಜನರು ಹಲವಾರು ಬಾರಿ ಪುರಸಭಾ ಸದಸ್ಯರಿಗೆ ಹೇಳಿದರೂ ಈತನ ಕವು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ಆಶ್ರಯ ಕಾಲೋನಿಯ ಹಲವಾರು ನಾಗರಿಕರು ದೂರತ್ತಿದ್ದಾರೆ. ಸಾಮಾನ್ಯವಾಗಿ ಸಿಮೆಂಟ್ ರಸ್ತೆ ಕನಿಷ್ಠಪಕ್ಷ ಹತ್ತು ಹದಿನೈದು ವರ್ಷ ಬಹಳ ಉತ್ತಮ ಸ್ಥಿತಿಯಲ್ಲಿ ಇರುತ್ತದೆ.
ಆದರೆ ಈ ರಸ್ತೆ ಸಿಮೆಂಟನ್ನು ಕಂಡುದು 1919 ಏಪ್ರಿಲ್ ನಲ್ಲಿ. ಈಗಲೇ ಈ ರೀತಿ ಅಲ್ಲಲ್ಲಿ ಸುಮಾರು 10, 20 ಕಡೆ ಗುಂಡಿಗಳು ಆಗಿದ್ದು ವಾಹನದವರಿಗೆ ಯಾವುದೇ ರೀತಿಯಲ್ಲಿ ಗುಂಡಿಗಳನ್ನು ತಪ್ಪಿಸಲು ಸಾಧ್ಯವಾಗದ ರೀತಿಯಲ್ಲಿ ರಸ್ತೆಯ ಪರಿಸ್ಥಿತಿಯಾಗಿದೆ. ರಸ್ತೆ ತಡೆಯ ಅಗತ್ಯ ಇಲ್ಲದೆ ಇರುವಲ್ಲಿಯೂ ಕೂಡ ರಸ್ತೆ ತಡೆಯನ್ನು ಹಾಕಿ ಅನಗತ್ಯ ತೊಂದರೆಯನ್ನು ವಾಹನದವರಿಗೆ ಉಂಟು ಮಾಡಲಾಗಿದೆ ಎನ್ನುವುದು ಸ್ಥಳೀಯರ ಆಕ್ರೋಶವಾಗಿದೆ.
ಪುರಸಭಾ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರು, ಮುಖ್ಯ ಅಧಿಕಾರಿಗಳು ತಕ್ಷಣ ಭೇಟಿ ನೀಡಿ ನಾಗರಿಕರಿಗೆ ಆಗುತ್ತಿರುವ ತೊಂದರೆಯನ್ನು ಆದಷ್ಟು ಶೀಘ್ರ ನಿವಾರಿಸುವುದು ಉತ್ತಮ. ಇಲ್ಲವಾದಲ್ಲಿ ಸ್ಥಳೀಯರು ಹಲವಾರು ಮಂದಿ ಈಗಾಗಲೇ ಪ್ರತಿಭಟನೆಯ ಸಿದ್ಧತೆಯನ್ನು ಮಾಡಲಾಗುತ್ತಿದೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.