ಮೂಡಬಿದಿರೆ:  ಜೈನಕಾಶಿ ಮೂಡಬಿದಿರೆ ಇಲ್ಲಿನ ಸಾವಿರ ಕಂಬದ ಬಸದಿಯ ವಾರ್ಷಿಕೋತ್ಸವ ರಥೋತ್ಸವದ ಧ್ವಜಾರೋಹಣ ಪ್ರಾರಂಭದ ದಿನವಾದ  ಗುರುವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ಋಷ್ಯಂತ್ (ಐಪಿಎಸ್) ಆಗಮಿಸಿದ್ದರು.

18 ಬಸದಿ ಆಡಳಿತದಾರ, ಮಹಾಕ್ಷೇತ್ರದ ಜೈನ ಮಹಾಸಂಸ್ಥಾನದ ಪೀಠಾಧ್ಯಕ್ಷ ಭಾರತ ಭೂಷಣ ಜಗದ್ಗುರು ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಅವರು ಅವರನ್ನು ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ ಬಸದಿ ದರ್ಶನ ಮಾಡಿಸಿ ಕ್ಷೇತ್ರದ ಇತಿಹಾಸ ಪೂಜಾ ಮಾಹಿತಿ ನೀಡಿದರು ಹಾಗೂ ಶ್ರೀ ಕ್ಷೇತ್ರದ ವತಿಯಿಂದ ಪ್ರಸಾದ ಸ್ಮರಣಿಕೆ ನೀಡಿ ಗೌರವಿಸಿ ಆಶೀರ್ವಾದಿಸಿ ಹರಸಿದರು. 

ಬಸದಿಯ ಮೊಕ್ತೇಸರ ಪಟ್ಣಶೆಟ್ಟಿ ಸುದೇಶ ಕುಮಾರ್, ಆದರ್ಶ್ ಜೈನ್, ಪುತ್ತಿಗೆ ಗ್ರಾಮ ಲೆಕ್ಕಿಗ ಎಸ್. ಕಿಶೋರ್, ವ್ಯವಸ್ಥಾಪಕ ಸಂಜಯಂತ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. 

ಸಂಜೆ ಧ್ವಜಾರೋಹಣದೊಂದಿಗೆ ಆರಂಭಗೊಂಡ ಸಾವಿರ ಕಂಬದ ಬಸದಿಯ ವಾರ್ಷಿಕ ರಥೋತ್ಸವ ಕಾರ್ಯಕ್ರಮ ಎ. 24ರ ವರೆಗೆ ಜರುಗಲಿದೆ ಎಂದು ಶ್ರೀ ಜೈನ ಮಠ ಮೂಡುಬಿದಿರೆ ಇದರ ವ್ಯವಸ್ಥಾಪಕ  ಸಂಜಯಂತ ಕುಮಾರ್ ಶೆಟ್ಟಿ ತಿಳಿಸಿದರು.