ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ ತಾಲೂಕಿನ ವಾಲ್ಪಾಡಿ ಗ್ರಾಮದ ಆನೆಗುಡ್ಡೆಯಲ್ಲಿ ಅಂಗನವಾಡಿ ಕೇಂದ್ರ ನವೆಂಬರ್ 7ರಂದು ಉದ್ಘಾಟಿಸಲ್ಪಟ್ಟಿತು. ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ರವರು ಟೇಪು ಕತ್ತರಿಸಿ, ದೀಪ ಬೆಳಗಿ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿದರು.
ಸುಮಾರು 22 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಕೇಂದ್ರವನ್ನು ನಿರ್ಮಿಸಲಾಗಿದೆ. ಶಾಸಕರು ಹಾಗೂ ಸ್ಥಳೀಯ ಮುಖ್ಯಸ್ಥರ ಮತ್ತು ಉದಾರದಾನಿಗಳ ಸಹಕಾರದಿಂದ ಈ ಕೇಂದ್ರ ಸುಂದರವಾಗಿ ನಿರ್ಮಾಣಗೊಂಡಿದೆ ಎಂದು ಶಾಸಕರು ತಮ್ಮ ಮಾತಿನಲ್ಲಿ ಪ್ರಶಂಸಿಸಿದರು. ಈ ಕೇಂದ್ರಕ್ಕಾಗಿ ಪ್ರಯತ್ನಗೈದು ಸಾಕಷ್ಟು ಸಹಕಾರ ನೀಡಿದ ನಾಲ್ಕು ಮಂದಿಯನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.