ಮೂಡಬಿದಿರೆ: ಸ್ಥಳೀಯ ವಿದ್ಯಾಗಿರಿಯಲ್ಲಿ ಆಳ್ವಾಸ್ ಆಯುರ್ವೇದಿಕ್ ಕಾಲೇಜಿನ ರಸಶಾಸ್ತ್ರ ವಿಭಾಗದವರು ತಯಾರಿಸಿದ ಉತ್ಪನ್ನಗಳು ಮಾರಾಟಕ್ಕೆ ಇದ್ದುವು. ಅದರಲ್ಲಿ ಚೆನ್ನಾಗಿ ಕಳಿತ ಹಲಸಿನ ಹಣ್ಣನ್ನು ಕಷಾಯ ಮಾಡಿ ಸೋಸಿ ಅದಕ್ಕೆ 15% ಸಕ್ಕರೆ, ಜಾತಕೀ ಪುಷ್ಪ ಇತ್ಯಾದಿಗಳನ್ನು ಹಾಕಿ ಶಾಸ್ತ್ರೋಕ್ತವಾಗಿ  ತಯಾರಿಸಿ, ಏಲಕ್ಕಿ ,ಚಕ್ಕೆ , ಲವಂಗ ಇತ್ಯಾದಿಗಳನ್ನು ಹಾಕಿ 45 ದಿನ ಇಟ್ಟು ತರುವಾಯ ಸೋಸಿ ಪಡೆದ ಆಸವಾರಿಷ್ಟ ಉತ್ತಮ ಪೋಷಕಾಂಶ ಭರಿತವಾಗಿದ್ದು ಹಸಿವನ್ನು ಹೆಚ್ಚಿಸಿ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಎಂದು ಕಂಡು ಬಂದಿದೆ ಹಾಗೂ ಇತ್ತೀಚಿನ ದಿನಗಳಲ್ಲಿ ಈ ಹಲಸಿನ ವೈನ್ ಅಥವಾ ಆಸವಾರಿಷ್ಟಕ್ಕೆ  ಹೆಚ್ಚಿನ ಬೇಡಿಕೆಯು ಬರುತ್ತಿದೆ. ಪ್ರಾಯೋಗಿಕವಾಗಿ ಮಾಡಿದ ಈ ಉತ್ಪನ್ನ ಹೆಚ್ಚು ಪ್ರಯೋಜನಕರ ಎಂದು ಕಂಡು ಬಂದಿದೆ.

ಹಲಸಿನ ಹಣ್ಣಿನ ಹಲ್ವಕ್ಕೆ ಏಲಕ್ಕಿ ,ಬೆಲ್ಲ,ಬಾದಾಮಿ, ಗೇರುಬೀಜ ಇತ್ಯಾದಿಗಳನ್ನು ಹಾಕಿ ಏರು ಪಾಕ ಮಾಡಿ ಪನಸ ಬರ್ಫಿ ಎನ್ನುವಂತಹ ಉತ್ಪನ್ನವನ್ನು ತಯಾರಿಸಲಾಗಿದೆ. ಇದು ಕೂಡ ಬಹಳಷ್ಟು ಬೇಡಿಕೆಯನ್ನು ಪಡೆದಿದೆ.

ಆಳ್ವಾಸ್ ನ್ಯೂಟ್ರಿ ಜಾಕ್ , ಕಳೆದ ವರ್ಷ ಪ್ರಥಮ ಬಾರಿಗೆ ಆಳ್ವಾಸ್ ನ್ಯೂಟ್ರಿ ಜಾಕ್ ಎನ್ನುವ ಕುಕೀಸ್ ಅಥವಾ ಬಿಸ್ಕೆಟ್ ಅನ್ನು ತಯಾರಿಸಿ ಮಾರಾಟ ಮಾಡಿದ್ದು ಹಲಸಿನ ಹಣ್ಣಿನ ಬೀಜದಿಂದ ಮಾಡಿರುವ ಈ ಉತ್ಪನ್ನಕ್ಕೆ ಕಾಳುಮೆಣಸನ್ನು ಸೇರಿಸಿ ಯಾವುದೇ ದುಷ್ಪರಿಣಾಮ ಉಂಟಾಗದಂತೆ ಮಾಡಿರುವ ಕಾರಣ ಬಹಳ ಬೇಡಿಕೆಯನ್ನು ಪಡೆದಿತ್ತು. ತಯಾರಿಸಿದ ಎಲ್ಲ ಉತ್ಪನ್ನಗಳು ಒಂದೇ ದಿನದಲ್ಲಿ ಮಾರಾಟವಾಗಿದ್ದವು. ಆದುದರಿಂದ ಈ ವರ್ಷ ಅಧಿಕ ಪ್ರಮಾಣದಲ್ಲಿ ಉತ್ಪನ್ನವನ್ನು ತಯಾರಿಸಿ ಆಳ್ವಾಸ್ ನ್ಯೂಟ್ರಿ ಜಾಕ್ ಎನ್ನುವಂತಹ ಹೆಸರಿನಿಂದ ಮಾರಾಟಕ್ಕೆ ತಂದಿರುತ್ತೇವೆ ಎಂದು ಆಳ್ವಾ ಸ್ ಆಯುರ್ವೇದಿಕ್ ಕಾಲೇಜಿನ ರಸ ಶಾಸ್ತ್ರ ವಿಭಾಗದ ಡಾ. ಕೃಷ್ಣಮೂರ್ತಿ ಯವರು ತಮ್ಮ ಕಾಲೇಜಿನ ಉತ್ಪನ್ನಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಸಚಿತ್ರ ವರದಿ ರಾಯಿ ರಾಜಕುಮಾರ್ ಮೂಡುಬಿದಿರೆ