ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ, ಅ 26: ಯುವ ವಕೀಲರಾಗಿ, ಪತ್ರಕರ್ತರ ಸಂಘಕ್ಕೆ ಶಾಶ್ವತ ಸ್ಥಳಾವಕಾಶ ಒದಗಿಸಲು ಶ್ರಮಿಸಿದ ವೇಣುಗೋಪಾಲ್ ಅತಿ ಚಿಕ್ಕ ಪ್ರಾಯದಲ್ಲಿ ಕೊರೋನಾದ ನಡುವೆಯೂ ಸಾಕಷ್ಟು ಸಾಧನೆ ಮಾಡಿದ್ದಾರೆ ಎಂದು ಹಿರಿಯ ವಕೀಲ, ಎಂ.ಸಿ.ಎಸ್.ಬೇಂಕಿನ ಅಧ್ಯಕ್ಷ ಬಾಹುಬಲಿ ಪ್ರಸಾದ್ ಸ್ಮರಿಸಿಕೊಂಡರು.
ಪ್ರತಿಯೊಬ್ಬರಲ್ಲೂ ತುಂಬಿರುತ್ತಿದ್ದ ಭರವಸೆ, ವಿಶ್ವಾಸಾರ್ಹತೆ ಶಿಥಿಲಗೊಂಡ, ಪ್ರಭುತ್ವದ ವಿರುದ್ಧ ಸತ್ಯವನ್ನು ಅರುಹುತ್ತಿದ್ದ ನವ,ನವ್ಯ ಮಾಧ್ಯಮಗಳೂ ಸತ್ಯದ ಹುಡುಕಾಟ ಮಾಡದೇ ವಿಶ್ವಾಸಾರ್ಹತೆಯ ಕೊರತೆಯನ್ನು ಎದುರಿಸುತ್ತಿವೆ ಎಂದು ಮಾಧ್ಯಮ ಮತ್ತು ವಿಶ್ವಾಸಾರ್ಹತೆ ಬಗ್ಗೆ ಸಂಪಾದಕ ರವೀಂದ್ರ ಶೆಟ್ಟಿ ಮಾತನಾಡಿದರು.
ಬಹುಮುಖ ಪ್ರತಿಭೆಯ ಪತ್ರಕರ್ತ ಶೇಖರ್ ಅಜೆಕಾರು ಅವರ ಸಂಪೂರ್ಣ ಮಾಹಿತಿಯನ್ನು ಧನಂಜಯ ಮೂಡುಬಿದಿರೆ ಸಭೆಯ ಮುಂದೆ ಪ್ರಸ್ತಾಪಿಸಿದರು.
ಹತ್ತು ಮಂದಿ ಬಹುಭಾಷಾ ಕವನಗಳನ್ನು ವಾಚಿಸಿದರು. ವೇದಿಕೆಯಲ್ಲಿ ಮಾಜಿ ಸಚಿವ, ಸಮಾಜ ಮಂದಿರ ಸಭಾದ ಅಧ್ಯಕ್ಷ ಅಭಯ ಚಂದ್ರ ಜೈನ್, ಪ್ರೆಸ್ ಕ್ಲಬ್ ಅಧ್ಯಕ್ಷ ಸೀತಾರಾಮ ಆಚಾರ್ಯ, ಸದಾನಂದ ನಾರಾವಿ ಹಾಜರಿದ್ದರು. ಅಶ್ರಫ್ ವಾಲ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಸನ್ನ ಹೆಗ್ಡೆ ಸ್ವಾಗತಿಸಿ ವಂದಿಸಿದರು.