ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಮಿಜಾರು ಗ್ರಾಮೀಣ ಪರಿಸರದ ಮಕ್ಕಳಿಗೆ ಕರ್ನಾಟಕ ಸರ್ಕಾರದ ಸಂಯುಕ್ತ ಪಬ್ಲಿಕ್ ಶಾಲಾ ಭಾಗ್ಯವನ್ನು ಒದಗಿಸಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವೂ ಇಲ್ಲಿ ದೊರೆಯುತ್ತಿರುವುದು ಸಂತಸಕರ ಸಂಗತಿ. ಪೋಷಕರು ಹಾಗೂ ದಾನಿಗಳ ಸಹಕಾರದಿಂದ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತಿರುವುದು ಇನ್ನೂ ಮೆಚ್ಚುವಂಥದ್ದು.
ಪ್ರಸ್ತುತ ಎಲ್.ಕೆ.ಜಿ. ಯಿಂದ 7ನೇ ತರಗತಿ ತನಕ ಒಟ್ಟು 422 ಮಂದಿ ಕಲಿಯುತ್ತಿದ್ದಾರೆ. ಆದರೆ ಸರ್ಕಾರದಿಂದ ಕೇವಲ 5 ಮಂದಿ ಖಾಯಂ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ದಾನಿಗಳು, ಸಹೃದಯಿ ಗಳ ಸಹಾಯದಿಂದ ಗೌರವ ಶಿಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ.
ಶಿಕ್ಷಣ ಇಲಾಖೆ, ಸಚಿವರು, ಸರ್ಕಾರ ಮುತುವರ್ಜಿ ವಹಿಸಿ ಅಗತ್ಯದಷ್ಟು ಕೊಠಡಿ, ಹಾಗೂ ಶಿಕ್ಷಕರನ್ನು ಒದಗಿಸಿ ಕೊಡಲು ಮೂಡುಬಿದಿರೆ ಶಾಸಕರ ಮೂಲಕ ಬೇಡಿಕೆಯ ಮನವಿಯನ್ನು ಅರ್ಪಿಸಿದರು.