ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಸ್ಥಳೀಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಆಳ್ವಾಸ್ ಹೆಲ್ತ್ ಸೆಂಟರ್ ಮತ್ತು ರೋಟರಿ ಕ್ಲಬ್ ಮೂಡಬಿದರೆ ಸಂಯುಕ್ತ ಆಶ್ರಯದಲ್ಲಿ ಗರ್ಭಕೋಶ ಕ್ಯಾನ್ಸರ್ ತಡೆಗಟ್ಟಲು ಬೃಹತ್ ಲಸಿಕ ಶಿಬಿರ ಮತ್ತು ಆಳ್ವಾಸ್ ಲಸಿಕ ಕೇಂದ್ರದ ಉದ್ಘಾಟನಾ ಸಮಾರಂಭ ಡಿಸೆಂಬರ್ 2ರಂದು ಆಳ್ವಾಸ್ ಹೆಲ್ತ್ ಸೆಂಟರ್ನಲ್ಲಿ ಜರುಗಿತು.
ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿ ಕ್ಯಾನ್ಸರ್ ತಡೆಯಲು ರೋಟರಿಯ ಸಮಾಜಮುಖಿ ಕಾರ್ಯ ಪ್ರಶಂಸನೀಯ ಎಂದು ಹೊಗಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೋಟರಿ ಗವರ್ನರ್ ವಿಕ್ರಂ ದತ್ತ, ಆಳ್ವಾಸ್ ಹೆಲ್ತ್ ಸೆಂಟರ್ ನ ಆಡಳಿತ ನಿರ್ದೇಶಕ ಡಾ. ವಿನಯ್ ಆಳ್ವ, ಜೋನ್ 4 ರೋಟರಿ ಜಿಲ್ಲಾ ಉಪ ನಿರ್ದೇಶಕ ಡಾ. ಮುರಳಿ ಕೃಷ್ಣ, ರೋಟರಿ ಕ್ಲಬ್ ಅಧ್ಯಕ್ಷ ರವಿಪ್ರಸಾದ್ ಉಪಾಧ್ಯಾಯ, ಡಾ. ಹರೀಶ್ ನಾಯಕ್, ಡಾ. ಹನಾ ಶೆಟ್ಟಿ, ರಂಗನಾಥ ಕಿಣಿ, ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಲಸಿಕೆಯನ್ನು ಪಡೆದುಕೊಂಡರು. ಶ್ರೀಕಾಂತ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ರತ್ನಾಕರ ಜೈನ್ ವಂದಿಸಿದರು.