ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ದ.ಕ. ಜಿಲ್ಲೆಯಲ್ಲಿ ಮೂಡುಬಿದಿರೆ ತಾಲೂಕು ಪಂಚಾಯತ್ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಗುರಿಮೀರಿದ ಸಾಧನೆಯನ್ನು ದಾಖಲಿಸಿದೆ. 

ನರೇಗಾ ಕಾಮಗಾರಿಯಲ್ಲಿ ಈ ಸಾಧನೆ ಮಾಡಲು ಮುಖ್ಯ ಕಾರಣ ಕಾಮಗಾರಿಯ ಚಿತ್ರವನ್ನು ಪ್ರತಿದಿನವೂ ತೆಗೆದು ಕಳುಹಿಸಬೇಕಿರುವುದು. ಮೂಡುಬಿದಿರೆ ತಾಲೂಕಿನ ಕೃಷಿಕರು ಖಾಸಗಿಯಾಗಿ ಎಲ್ಲ ಕೆಲಸವನ್ನು, ದಾಖಲೆಗಳನ್ನು ಕಳುಹಿಸಿದ ಕಾರಣ ಈ ಸಾಧನೆ ವಾಗಿದೆ ಎಂದು ಮೂಡುಬಿದರೆ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಕುಸುಮಾಧರ ಮಾಹಿತಿಯನ್ನು ನೀಡಿರುತ್ತಾರೆ.

ಸಹಾಯಕ ಕಾರ್ಯವಾಹ ಸಾಯೀಶ್ ಚೌಟ ರವರು ಇತರ ವಿವರಗಳನ್ನು ನೀಡಿದರು.