ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ ತಾಲೂಕಿನ ತೋಡಾರು ಜುಮ್ಮಾ ಮಸೀದಿಯ ಉರೂಸ್ ಸಮಾರಂಭ ಏಪ್ರಿಲ್ 18 ರಿಂದ 26ರ ತನಕ ನಡೆಯಲಿದೆ. ಸುಮಾರು 15 ಸಾವಿರ ಮಂದಿ ಸೇರುವ ಸಂಭವವಿದ್ದು ಪ್ರತಿ ಎರಡು ವರ್ಷಕ್ಕೊಮ್ಮೆ ಈ ಕಾರ್ಯಕ್ರಮ ನಡೆಯುತ್ತದೆ. 

ಈ ವರ್ಷದ ಕಾರ್ಯಕ್ರಮದಲ್ಲಿ ಪ್ರಮುಖ ವಿದ್ವಾಂಸರು, ಮುಖಂಡರುಗಳು, ಹಾಗೂ ಪ್ರಚಾರ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಜುಮ್ಮಾ ಮಸೀದಿಯ ಅಧ್ಯಕ್ಷ ಇಕ್ಬಾಲ್ ಎಂ ಎ ಎಸ್, ಉರುಸ್ ಸಮಿತಿಯ ಅಧ್ಯಕ್ಷ ಟಿ ಎಚ್ ಇಸ್ಮಾಯಿಲ್, ಉಪಾಧ್ಯಕ್ಷ ಎಂ ಎ ರಜಾಕ್, ಕಾರ್ಯದರ್ಶಿ ಹಿದಾಯತ್ ಹೊಸಮನೆ, ಕಚಂಚಿ ಇಬ್ರಾಹಿಂ, ಜೊತೆ ಕಾರ್ಯದರ್ಶಿ, ಆಶೀರ್ ಜನವರಿ 30ರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರೆ. ಇದೊಂದು ಸೌಹಾರ್ದ ಕೂಟವಾಗಿದ್ದು ಸಾರ್ವಜನಿಕರು ಭಾಗವಹಿಸುತ್ತಾರೆ ಎಂದರು.