ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಕೇವಲ ಆಧಾರ್ ದೃಢೀಕರಣ ದೊಂದಿಗೆ ಯಾವುದೇ ವ್ಯಕ್ತಿ ನಡೆದಾಡಲು, ಕೂರಲು ಅಸಾಧ್ಯವಾದರೆ ಕುಳಿತಲ್ಲೇ, ಮಲಗಿದಲ್ಲೇ ಭಾರತೀಯ ಅಂಚೆ ಇಲಾಖೆಯವರು ಆಧಾರ್ ಆಧಾರಿತ ಜೀವನ ಪ್ರಮಾಣ ಪತ್ರವನ್ನು ನೀಡುತ್ತಾರೆ.
ಪ್ರತಿಯೊಬ್ಬರ ತಮ್ಮಸ್ಥಳಕ್ಕೆ ಬರುವ ಅಂಚೆ ಅಣ್ಣನಲ್ಲಿ ತಿಳಿಸಿದರೆ ಅವರು ಕಚೇರಿಯ ವ್ಯವಸ್ಥಾಪಕರಿಗೆ ತಿಳಿಸಿ ತನ್ಮೂಲಕ ಸುಲಭವಾಗಿ ಕುಳಿತಲ್ಲೇ, ಮಲಗಿದಲ್ಲೇ ಅವರ ಪಿಂಚಣಿ ಸೌಲಭ್ಯವನ್ನು ಮುಂದುವರಿಸಿ ಎಲ್ಲ ಸೌಲಭ್ಯವನ್ನು ಪಡೆಯಲು ಅನುಕೂಲ ಮಾಡಿಕೊಡಲಿದ್ದಾರೆ. ಇಂತಹ ಅಂಚೆ ಇಲಾಖೆಯವರ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆಯಬಹುದೆಂದು ಪುತ್ತೂರು ಅಂಚೆ ಇಲಾಖೆಯ ಮಾರುಕಟ್ಟೆ ವ್ಯವಸ್ಥಾಪಕ ಗುರುಪ್ರಸಾದ್ ತಿಳಿಸಿದ್ದಾರೆ.