ವರದಿ ರಾಯಿ ರಾಜಕುಮಾರ

ಮೂಡುಬಿದಿರೆ: ಸಮಾಜ ಮಂದಿರ ಸಭಾ, ಯುವವಾಹಿನಿ ಘಟಕದ ಆಶ್ರಯದಲ್ಲಿ ನಾಲ್ಕನೇ ವರ್ಷದ ಗೂಡು ದೀಪ ಹಾಗೂ ರಂಗೋಲಿ ಸ್ಪರ್ಧೆ ಸಮಾಜ ಮಂದಿರದಲ್ಲಿ ಅಕ್ಟೋಬರ್ 18ರಂದು ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿ ಸಮಾಜ ಮಂದಿರ ಸಭಾ ಅಧ್ಯಕ್ಷ, ಮಾಜಿ ಸಚಿವ ಅಭಯ ಚಂದ್ರ ಜೈನ್ ಉದ್ಘಾಟಿಸಿದರು. ಗೂಡು ದೀಪದ ರಚನೆಯ ಹಳೆಯ ಕೈಚಳಕವನ್ನು ನೆನಪಿಸುವ ಕಾರ್ಯ ಶ್ಲಾಘನೀಯವಾದುದು ಎಂದು ಆಳ್ವಾಸ್ ಶಿಕ್ಷಣ ಫೌಂಡೇಶನ್ ವಿವೇಕ್ ಆಳ್ವ ನುಡಿದರು.

ಗೂಡು ದೀಪ ನಿರ್ಮಿಸುವ ಕಲೆ ಅತ್ಯಪೂರ್ವ, ಅದನ್ನು ಉಳಿಸಿ ಬೆಳೆಸಿ ಎಂದು ಕೇಂದ್ರ ಸಮಿತಿಯ ಲೋಕೇಶ್ ಕೋಟ್ಯಾನ್ ಅಭಿನಂದಿಸಿದರು. 

ಇದೇ ಸಂದರ್ಭದಲ್ಲಿ ಪಶು ವೈದ್ಯಕೀಯ ಇಲಾಖೆಯಲ್ಲಿ ಸೇವೆ ಮಾಡಿದ ವಿನುತ ಆನಂದ್ ಹಾಗೂ 25 ಬಾರಿ ರಕ್ತದಾನ ಮಾಡಿದ ಗಿರೀಶ್ ಕೋಟ್ಯಾನ್ ಅವರನ್ನು ಅಭಿನಂದಿಸಲಾಯಿತು.

ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಶ್ರೇಯಾ, ದ್ವಿತೀಯ ಶ್ರಾವಣ್ಯ ಆಚಾರ್ಯ, ತೃತೀಯ ಸಾನ್ವಿ. ಗೂಡು ದೀಪ ಸಾಂಪ್ರದಾಯಿಕ ವಿಭಾಗದಲ್ಲಿ ಪ್ರಥಮ ರಕ್ಷಿತ್ ಕುಮಾರ್, ಆಧುನಿಕ ವಿಭಾಗದಲ್ಲಿ ಪ್ರಥಮ ಮಂಗಳೂರು ವಿಠ್ಠಲ್ ಭಟ್, ದ್ವಿತೀಯ ಸುಂಕದಕಟ್ಟೆ ವೈಶಲ್ ಅಂಚನ್, ತೃತೀಯ ನಿಡ್ಡೋಡಿ ಜನಾರ್ಧನ. ಮಾದರಿ ವಿಭಾಗದಲ್ಲಿ ಪ್ರಥಮ ಪುತ್ತಿಗೆ ಪದವು ರೋಹಿತ್ ನಾಯ್ಕ, ದ್ವಿತೀಯ ರಂಜಿತ್, ತೃತೀಯ ಯತೀಶ್ ಆಚಾರ್ಯ.

ಘಟಕದ ಅಧ್ಯಕ್ಷ ಮುರುಳೀಧರ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉದ್ಯಮಿಗಳಾದ ಅಬುಲಾಲ್ ಪುತ್ತಿಗೆ, ಕುಮಾರ್ ಪೂಜಾರ್, ಜಾವೇದ್ ಷೇಕ್ ಹಾಜರಿದ್ದರು. ಜಗದೀಶ್ ಚಂದ್ರ ಸ್ವಾಗತಿಸಿದರು.