ಮುಂಬಯಿ:  ಗುಜರಾತ್ ರಾಜ್ಯದಲ್ಲಿನ ಅಹಮದಾಬಾದ್‍ನಲ್ಲಿ ಸೇವಾ ನಿರತ ಬಂಟ್ಸ್ ಸಂಘ ಅಹಮದಾಬಾದ್ (ರಿ.) ಸಂಸ್ಥೆಯ ಉಪಾಧ್ಯಕ್ಷ ರವಿರಾಜ್ ಎಂ.ಶೆಟ್ಟಿ (56) ಕಳೆದ ಮಂಗಳವಾರ ವಿಧಿವಶರಾದರು. ಬಂಧುಗಳು ಮತ್ತು ಪತ್ನಿ ಜೊತೆಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದು ಹಿಂತಿರುಗುತ್ತಿದ್ದಾಗ ಸಿಂಗಾಪುರ ಏರ್ಪೋರ್ಟ್ ನಲ್ಲೇ  ತೀವ್ರ ಹೃದಯಘಾತಕ್ಕೊಳಗಾಗಿ ನಿಧನರಾದರು.

ಉಡುಪಿ ಜಿಲ್ಲೆಯ ಬಾರ್ಕೂರು ಸಾೈಬರಕಟ್ಟೆ ಮೂಲತಃ ರವಿರಾಜ್ ಶೆಟ್ಟಿ ಅವರು ಕಳೆದ ಅನೇಕ ವರ್ಷಗಳಿಂದ ಗುಜರಾತ್‍ನ ಅಹಮದಾಬಾದ್‍ನಲ್ಲಿ ತನ್ನ ಮಾಲೀಕತ್ವದಲ್ಲಿ ಆರ್.ಆರ್ ಎಲೆಕ್ಟ್ರಿಕಲ್ ನಡೆಸುತ್ತಾ ಸ್ಥಳಿಯವಾಗಿ ಧಾರ್ಮಿಕ, ಸಮಾಜಿಕ ಸೇವೆಗಳಲ್ಲಿ ತೊಡಗಿಸಿ ಜನಾನುರೆಣಿಸಿದ್ದರು. ಮೃತರು ಪತ್ನಿ, ಒಂದು ಗಂಡು, ಒಂದು ಹೆಣ್ಣು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ರವಿರಾಜ್ ಎಂ.ಶೆಟ್ಟಿ ಅಕಾಲಿಕ ನಿಧನಕ್ಕೆ ಬಂಟ್ಸ್ ಸಂಘ ಅಹಮದಾಬಾದ್ ಇದರ ಅಧ್ಯಕ್ಷ ನಿತೇಶ್ ಎಸ್.ಶೆಟ್ಟಿ ಅಜೆಕಾರ್  ಮತ್ತು ಸರ್ವ ಪದಾಧಿಕಾರಿಗಳು, ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ, ರವಿನಾಥ್ ಶೆಟ್ಟಿ, ಶಂಕರ್ ಶೆಟ್ಟಿ ಅಂಕ್ಲೇಶ್ವರ್, ಗುಜರಾತ್ ಬಿಲ್ಲವ ಸಂಘ ಇದರ ಸ್ಥಾಪಕ ಸದಸ್ಯ ಮೋಹನ್ ಸಿ.ಪೂಜಾರಿ ಅಹ್ಮದಾಬಾದ್ ಸೇರಿದಂತೆ ನೂರಾರು ಗಣ್ಯರು ಸಂತಾಪ ವ್ಯಕ್ತ ಪಡಿಸಿ ಕಂಬನಿ ಮಿಡಿದಿದ್ದಾರೆ.

ಬರುವ ಡಿ. 01ರ ಆದಿತ್ಯವಾರ ಬಂಟ್ಸ್ ಸಂಘ ಅಹಮದಾಬಾದ್ ಸಂಸ್ಥೆ ಆಯೋಜಿಸಿದ್ದ 14ನೇ ವಾರ್ಷಿಕ ಮಹಾಸಭೆ ಮತ್ತು 31ನೇ ವಾರ್ಷಿಕೋತ್ಸವವನ್ನು ರವಿರಾಜ್ ಶೆಟ್ಟಿ ಅವರ ಅಕಾಲಿಕ ನಿಧನಕ್ಕಾಗಿ ಮುಂದೂಡಿ ಡಿ.15ರ ಆದಿತ್ಯವಾರ ನಡೆಸಲಿದೆ. ಅಂತೆಯೇ ಉಪಾಧ್ಯಕ್ಷ ರವಿರಾಜ್ ಶೆಟ್ಟಿ ನಿಧನಕ್ಕಾಗಿ ಬಂಟ್ಸ್ ಸಂಘ ಅಹಮದಾಬಾದ್ ಸಂತಾಪ ಸಭೆಯನ್ನು ನ. 24ರ ಆದಿತ್ಯವಾರ 5.00 ಗಂಟೆಗೆ ಅಹಮದಾಬಾದ್ ಮಿಠಕಲಿ ಇಲ್ಲಿನ ಲಯನ್ಸ್ ಸಭಾಗೃಹದಲ್ಲಿ ನಡೆಸಲಾಗುವುದು ಎಂದು ನಿತೇಶ್ ಎಸ್.ಶೆಟ್ಟಿ ತಿಳಿಸಿದ್ದಾರೆ.