ಲೇಖನ ರಾಯಿ ರಾಜಕುಮಾರ ಮೂಡುಬಿದಿರೆ
ಕಡಂದಲೆ ಯಂತಹ ಗ್ರಾಮೀಣ ಪ್ರದೇಶದಲ್ಲಿ ಜನಿಸಿ, ಎಂ.ಬಿ.ಎ. ಪದವಿ ಪಡೆದು ಛತ್ತೀಸಗಢದ ಉದ್ಯಮಿ ಸನ್ನಿ ಪರೇಖ್ ರಾಯ್ ಪುರ್ ರನ್ನು ವಿವಾಹವಾಗಿ ಛತ್ತೀಸಗಢ ರಾಜ್ಯವನ್ನು ನಮಿ ರೈ ಪ್ರತಿನಿಧಿಸಿ 180 ಕಿಲೋ ನೂತನ ದಾಖಲೆಯನ್ನು ರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಸ್ಥಾಪಿಸಿದ್ದಾರೆ.
ಫೆಬ್ರವರಿ 19 ರಿಂದ 23 ರ ತನಕ ಪಂಜಾಬಿನ ಲೂಧಿಯಾನಾದಲ್ಲಿ ಜರುಗಿದ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಎರಡು ದಾಖಲೆಗಳನ್ನು ಸ್ಥಾಪಿಸಿ ಸ್ವರ್ಣ ಪದಕ ದೊಂದಿಗೆ "ಅತ್ಯಂತ ಬಲಿಷ್ಠ ಮಹಿಳೆ" ಪ್ರಶಸ್ತಿಯನ್ನು ಬಾಚಿಕೊಂಡು 2025 ರ ಜುಲೈ ತಿಂಗಳಲ್ಲಿ ಜಪಾನ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಮಗಳು ಮೂರೂವರೆ ವರ್ಷದ ಥಿಯಾ ಪಾರೇಖ್ ಈಗಲೇ ಪವರ್ ಲಿಫ್ಟಿಂಗ್ ಕಲಿಯುತ್ತಿದ್ದಾಳೆ.
ನಮಿ ರೈ ಕಡಂದಲೆ ವಾಸಿ ನಿವೃತ್ತ ಅಧ್ಯಾಪಕ ದಂಪತಿಗಳಾದ ಸದಾಶಿವ ರೈ ಹಾಗೂ ಜಯಲಕ್ಷ್ಮಿ ರೈ ಗಳ ಸುಪುತ್ರಿ ಯಾಗಿದ್ದಾಳೆ. ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಕೂಡಾ ಪ್ರಶಸ್ತಿ ದೊರಕಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸುವಂತಾಗಲಿ ಎಂದು ಹಾರೈಸುವ.