ಅಶ್ವಯುಜ ಶುಕ್ಲ ಪಕ್ಷದ ಷಷ್ಠಿಯಂದು ನವರಾತ್ರಿಯ ಆರನೇಯ ದಿನದ ದುರ್ಗೆಯ ಆರನೇ  ಕಾತ್ಯಾಯಿನಿ ದೇವಿ. ಕಾತ್ಯಾಯಿನಿಯನ್ನು ಪೂಜಿಸಿದರೆ ತಕ್ಶಣವೇ ಫಲ ದೊರೆಯುತ್ತದೆ ಎಂದು ಹೇಳಲಾಗುತ್ತದೆ. 

ಧರ್ಮ, ಅರ್ಥ, ಕಾಮ, ಮೋಕ್ಷ ಎನ್ನುವ ನಾಲ್ಕು ಪುರುಷಾರ್ಥಗಳು ಕಾತ್ಯಾಯಿನಿಯ ಉಪಾಸನೆಯಿಂದ ಪ್ರಾಪ್ತವಾಗುತ್ತದೆ ಎಂಬ ಪ್ರತೀತಿ ಇದೆ. ಏಕೆಂದರೆ ಈಕೆ ಕಾತ್ಯಾಯನ ಮಹರ್ಷಿಗಳ ಸುಪುತ್ರಿ. 

ಈಕೆ ದಶಮಿಯಂದು ಮಹಿಷಾಸುರನನ್ನು ವಧಿಸಿದಳು. ಚಿನ್ನದಂಥ ತೇಜಸ್ವಿ ಕಾಂತಿಯ ಈಕೆ ಚತುರ್ಭುಜಳು. ಒಂದು ಕೈಯಲ್ಲಿ ಖಡ್ಗ, ಇನ್ನೊಂದು ಕೈಯಲ್ಲಿ ಕಮಲ, ಮೂರನೇ ಕೈ ಅಭಯ ಮುದ್ರೆಯದಾದರೆ, ನಾಲ್ಕನೇ ಕೈ ವರವನ್ನು ನೀಡುವ ಮುದ್ರೆಯಲ್ಲಿದೆ.