ಲೇಖನ ರಾಯಿ ರಾಜಕುಮಾರ

ಅಕ್ಟೋಬರ್ 17 ಬಹಳ ಪವಿತ್ರವಾದ ದಿನ. ಅಂದು ತುಲಾ ಸಂಕ್ರಮಣವಾಗಿದ್ದು ಅದನ್ನು ಕಾವೇರಿ ಸಂಕ್ರಮಣ ಎಂದೂ ಕರೆಯಲಾಗುತ್ತದೆ. ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ದೇವಾಲಯದ ಕಾರಂಜಿಯಲ್ಲಿ ತೀರ್ಥರೂಪದಲ್ಲಿ ಕಾವೇರಿ ಹರಿಯಲು ಪ್ರಾರಂಭಿಸುತ್ತಾಳೆ. 

ಇದು ರೈತರ ಸಂತಸದ ಸಮಯವೂ ಆಗಿದೆ ಏಕೆಂದರೆ ಬೆಳೆದ ಪೈರು ಪಚ್ಚೆ ಮನೆಗೆ ಪ್ರವೇಶಿಸಿ ತುಲಾ ಮಾಸದಲ್ಲಿ ಮನೆ ಮಂದಿಗೆಲ್ಲ ಸಂತಸವನ್ನು ನೀಡುವ ಸಂಭ್ರಮದ ಸಮಯವಾಗಿದೆ. 

ಸೂರ್ಯನು ಕನ್ಯಾ ರಾಶಿಯಿಂದ ಅಕ್ಟೋಬರ್ 17ರಂದು ರಾತ್ರಿ ಸುಮಾರು ಒಂದು ಗಂಟೆಯ ಸಮಯದಲ್ಲಿ ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ಕೊಡಗಿನ ಭಾಗಮಂಡಲದಲ್ಲಿರುವ ಭಗಂಡೇಶ್ವರ ದೇವಾಲಯದಿಂದ ಸುಮಾರು 2 ಕಿ.ಮೀ. ಎತ್ತರದ  ಬೆಟ್ಟದ ಮೇಲಿರುವ ತಲಕಾವೇರಿಯೇ ಕಾವೇರಿಯ ಉಗಮ ಸ್ಥಾನ. ತಲಕಾವೇರಿಯ ಬ್ರಹ್ಮಕುಂಡದಲ್ಲಿ ಉಕ್ಕಿ ಬಂದ ಕಾವೇರಿಯ ನೀರಿನಲ್ಲಿ ಮಿಂದು ಭಕ್ತರು ಪುಳಕಿತರಾಗುತ್ತಾರೆ. ಅದೇ ರೀತಿ ಪಾಪಕರ್ಮಗಳ ಪರಿಹಾರಕ್ಕಾಗಿ ಕಾವೇರಿ, ಕನ್ನಿಕೆ, ಸುಜೋತ್ ನದಿಗಳ ಸಂಗಮದಲ್ಲಿ ಸ್ನಾನವನ್ನೂ ಮಾಡುತ್ತಾರೆ.