ಓಂ ಶ್ರೀ ಶ್ರೀ ಶ್ರೀ 1008 ಮಹಾವೀರ ಸ್ವಾಮಿ ನಮಃ ಜೈನ ಕಾಶಿ ಮೂಡು ಬಿದಿರೆ ಯಲ್ಲಿ ಮಹಾವೀರ ಮೋಕ್ಷ ಕಲ್ಯಾಣ, ದೀಪಾವಳಿ ಮಹಾ ಅರ್ಗ್ಯ ಇಂದು 04.11.2021ರಂದು ಶ್ರೀ ಜೈನ ಮಠ ದಲ್ಲಿ ಪರಮ ಪೂಜ್ಯ 108 ದಿವ್ಯ ಸಾಗರ ಮುನಿ ರಾಜರ ಪಾವನ ಸಾನಿಧ್ಯ ದಲ್ಲಿ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಸ್ವಾಮೀಜಿ ಜೈನ ಕಾಶಿ ಶ್ರೀ ದಿಗಂಬರ ಮಠ ಮೂಡುಬಿದಿರೆ ಇವರ ಮಾರ್ಗದರ್ಶನ ಉಪಸ್ಥಿತಿ ಯಲ್ಲಿ ಹಾಗೂ ಭಗವಾನ್ ಶ್ರೀ ಶ್ರೀ ಶ್ರೀ 1008 ಮಹಾ ವೀರ ಸ್ವಾಮಿ ಮೋಕ್ಷ ಕಲ್ಯಾಣ ದೀಪಾವಳಿ ಅರ್ಗ್ಯ ವಳಿ ಯು ಕ್ರಮ ವಾಗಿ ಶ್ರೀ ಜೈನ ಮಠ ಶೆಟ್ರ ಬಸದಿ ಬೆಟ್ಕೇರಿ ಬಸದಿ ಗಳಲ್ಲಿ ರಂದು ಬೆಳಿಗ್ಗೆ ಗಂಟೆ 4.00 ರಿಂದ ವಿಶೇಷ ಅಭಿಷೇಕ 4.30ಕ್ಕೆ ನಿರ್ವಾಣ ಪೂಜೆ ಮೋಕ್ಷ ಕಲ್ಯಾಣ ಮಹಾ ಅರ್ಘ್ಯವಳಿ ಪೂಜೆಯು 18 ಬಸದಿ ಗಳಲ್ಲಿ ನೆರವೇರಿತು.
04.10.21ರಂದು ಅಪರಾಹ್ನ 3.00 ರಿಂದ ಚಾತುರ್ಮಸ ನಿರತ ಪರಮ ಪೂಜ್ಯ 108 ದಿವ್ಯ ಸಾಗರ ಮುನಿ ರಾಜರ ಕಲಶ ವಿಸರ್ಜನೆ ಚಾ ತುರ್ಮಸ ನಿಷ್ಠಾಪ ನಾಕ್ರಿಯೆ, ಯು ಜರುಗಿತು ಧರ್ಮೋಪದೇಶ ನೀಡಿದ ಮುನಿ ವರ್ಯರು ನಮ್ಮ ಜೀವನ ಮುಕ್ತಿ ಯ ಗುರಿಯ ಕಡೆ ಇರಬೇಕು, ಸುಷು ಪ್ತಿ, ನಿದ್ರಾ, ಸ್ವಪ್ನ ಸ್ಥಿತಿ ಯಿಂದ ಜಾಗೃತ ಸ್ಥಿತಿ ಯಲ್ಲಿ ಇದ್ದ ವರು ಮಾತ್ರ ಆತ್ಮ ಪರಮಾತ್ಮ ಭೇದ ತಿಳಿಯುವರು ಎಂದು ನುಡಿದರು.
ಅಪರಾಹ್ನ 3.00ಕ್ಕೆ ಶ್ರೀ ಮಠದ ಧರ್ಮ ಸಭಾ ಮಂಟಪದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಚಾತುರ್ಮಾಸ ಯಶಸ್ವೀ ಗಾಗಿ ಶ್ರಮಿಸಿದ ಸರ್ವ ರನ್ನೂ ಮುನಿ ಗಳು ಹಾಗೂ ಸ್ವಾಮೀಜಿ ಅಭಿನಂದಿಸಿ ಶ್ರೀಫಲ ನೀಡಿ ಹರಸಿ ಆಶೀರ್ವಾದ ಮಾಡಿದರು.
ಆಹಾರ ಸಮಿತಿ ಯಲ್ಲಿ ಸೇವೆ ಮಾಡಿದ ಶ್ರೀಮತಿ ಶಕುಂತಲಾ,ಶ್ವೇತಾ ವಕೀಲರು,ವಿಶಾಖಾ ಮಂಜುಳಾ ಅಭಯ ಚಂದ್ರ, ದಿವ್ಯಾ, ಶುಭ, ಮೋಹಿನಿ ವಿಮಲ್ ಇವರಿಗೆ ಶ್ರೀ ಫಲ ನೀಡಿ ಅಭಿನಂದಿಸಲಾಯಿತು. ಭಟ್ಟಾರಕರು ಸರ್ವರಿಗೂ ಮಹಾವೀರ ಮೋಕ್ಷ ಕಲ್ಯಾಣ ದೀಪಾವಳಿ ಶುಭಾಶಯಗಳು ತಿಳಿಸಿ ಸಮ್ಯಕ್ ಜ್ಞಾನ ವೆಂಬ ದೀಪ ದ ಮೂಲಕ ಮಿಥ್ಯ ಜ್ಞಾನ ವೆಂಬ ಕತ್ತಲೆ ದೂರ ಮಾಡಿ ಸರ್ವರಿಗೂ ಮಹಾತ್ಮ ನಿಂದ ಪರಮಾತ್ಮ ನಾಗುವ ಉಪಾಯ ನೀಡಿದವರು ಭಗವಾನ್ ಮಹಾವೀರ ಸ್ವಾಮಿ ಯೋಗ ನಿರೋದ ಮಾಡಿ ಮುಕ್ತಿ ಪಡೆದ ದಿನ ದೀಪಾವಳಿ ಇಂದಿನಿಂದ ಹೊಸ ವೀರ ನಿರ್ವಾಣ ಸಂ ವಸ್ಸರ 2548 ಪ್ರಾರಂಭ ಹೊಸ ವರ್ಷ ಇಂದಿನಿಂದ ಆರಂಭ ಎಂದು ಆಶೀರ್ವಚನ ನೀಡಿದರು. ಚಾತುರ್ಮಸ ಸಂಧರ್ಭ, ಕಲಶ ಸ್ಥಾಪನೆ ದಿನ ಕಲಶ ಪಡೆದು ಕೊಂಡವರಿಗೆ ಕಲಶ ವಿತರಣೆನೆರವೇರಿತು.
ಶ್ರೀ ಕೆ ಅಭಯ ಚಂದ್ರ ಜೈನ್,ಕಾರ್ಯಧ್ಯಕ್ಷ ಪಟ್ಣ ಶೆಟ್ಟಿ ಸುದೇಶ್, ದಿನೇಶ್ ಕುಮಾರ್, ಶಂಭವ ಕುಮಾರ್, ಸನತ್ ಕುಮಾರ್, ಅನಂತ ವೀರ, ಪ್ರವೀಣ್ ಚಂದ್ರ, ನೇಮಿರಾಜ್, ಪದ್ಮರಾಜ್, ಯಂ. ವಿ ಶೆಟ್ಟಿ ಚಾತುರ್ಮಸ ವ್ಯವ ಸ್ಥಾಪನ ಸಮಿತಿ 2021 ರ ಸಮಸ್ತ ಪದಾಧಿಕಾರಿಗಳು ಸದಸ್ಯರು,ಉಪಸ್ಥಿತರಿದ್ದರು.
ವರದಿ
ಶ್ರೀ ಸಂಜಯಂಥ ಕುಮಾರ ಶೆಟ್ಟಿ