ಕಾರ್ಕಳ: ಡಿಸೆಂಬರ್ 20 ರಂದು ಕ್ರಿಯೇಟಿವ್ ಪುಸ್ತಕ ಮನೆ, ಕಾರ್ಕಳ ಮತ್ತು ಕನ್ನಡ ವಿಭಾಗ, ಸಂತ ಅಲೋಶಿಯಸ್‌ ಪರಿಗಣಿತ ವಿಶ್ವವಿದ್ಯಾಲಯ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಖ್ಯಾತ ಬರಹಗಾರ ಡಾ. ಕೆ. ಚಿನ್ನಪ್ಪ ಗೌಡರ ಸಂಶೋಧನಾ ಕೃತಿ “ಭೂತಾರಾಧನೆ - ಮಾಯದ ನಡೆ ಜೋಗದ ನುಡಿ” ಯ ಬಿಡುಗಡೆ ಸಮಾರಂಭ ನಡೆಯಲಿದೆ.

ಈ ಕಾರ್ಯಕ್ರಮವು ಸಂಜೆ 3.00 ಗಂಟೆಗೆ ಮಂಗಳೂರಿನ ಎಲ್‌ಎಫ್ ರಸ್ಕಿನ ಸಭಾಂಗಣ, ಎಲ್ ಸಿ ಆರ್ ಐ ಬ್ಲಾಕ್, ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿದೆ. ಡಾ. ಬಿ.ಎ. ವಿವೇಕ ರೈ ಅವರು ಕೃತಿ ಅನಾವರಣ ಮಾಡಲಿದ್ದು ಡಾ. ರಾಜಶೇಖರ್ ಹಳೆಮನೆ ಕೃತಿ ಅವಲೋಕನ ಮಾಡಲಿದ್ದಾರೆ.  ಅಶ್ವತ್ ಎಸ್. ಎಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಡಾ. ಪ್ರವೀಣ್ ಮಾರ್ಟೀಸ್ ಎಸ್. ಜೆ, ಡಾ. ನಾಗಪ್ಪ ಗೌಡ ಆರ್., ಡಾ. ಕೆ. ಚಿನ್ನಪ್ಪ ಗೌಡ ಹಾಗೂ ಇತರ ಗಣ್ಯರು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶೇಖರ ಪರವ ಅವರಿಗೆ ಗೌರವ ಸನ್ಮಾನ ನಡೆಯಲಿದೆ.