ಜಾಗತಿಕ ಪತ್ರಕರ್ತರ ಪಂಡೋರಾ ಪೇಪರ್ಸ್ ಸೋರಿಕೆ ಆಗಿದ್ದು 119,00,00,000 ಕೋಟಿ ಕಡತಗಳು ಬಯಲಾಗಿವೆ.
ಇದರಲ್ಲಿ ಉದ್ಯಮಿಗಳಲ್ಲದೆ 36 ದೇಶಗಳ ನಾಯಕರು ತೆರಿಗೆ ವಂಚನೆಗಾಗಿ ಒಳಗೊಂಡಿರುವುದು ಬಯಲಾಗಿದೆ. ಅಧಿಕಾರದಲ್ಲಿ ಇರುವ ಪ್ರಧಾನಿ, ಅಧ್ಯಕ್ಷ, ಮೇಯರ್ ತನಕ ಹಲವರು ತೆರಿಗೆ ವಂಚನೆ ಹೂಡಿಕೆ ಮಾಡಿರುವುದು ಬಯಲಾಗಿದೆ.
ಭಾರತದ ವಡೋದರ ಸಹಿತ ಪನಾಮ, ದುಬಾಯಿ, ಮೊನಾಕೊ, ಸ್ವಿಜರ್ಲ್ಯಾಂಡ್, ಕೇಮನ್ ಐಲ್ಯಾಂಡ್ ಇಲ್ಲೆಲ್ಲ ತೆರಿಗೆ ವಂಚಿಸಲೆಂದೇ ಹೂಡಿಕೆ ಮಾಡಲಾಗಿದೆ ಹಾಗೂ ಕಂಪೆನಿಗಳನ್ನು ತೆರೆಯಲಾಗಿದೆ. ಕೆಲವರು ತಮ್ಮ ಐಶಾರಾಮಿ ವಸ್ತುಗಳನ್ನು ಮುಚ್ಚಿಡಲೆಂದೇ ಇಂಥ ಕಡೆ ಲಾಕರ್ ಇಲ್ಲವೇ ನಕಲಿ ಕಂಪೆನಿ ಹೊಂದಿದ್ದಾರೆ.