ತಾಲಿಬಾನ್ ಅಂಕೆಗೆ ಸಿಗದೆ ಯುದ್ಧ ಹೂಡಿದ್ದ ಪಂಜ್‌ಶಿರ್ ಪ್ರಾಂತ್ಯವನ್ನು ತಾಲಿಬಾನಿಗರು ವಶಪಡಿಸಿಕೊಂಡಿದ್ದಾರೆ.

ಈ ಪ್ರಾಂತ್ಯದ ಗವರ್ನರ್‌ರ ಕಟ್ಟಡವನ್ನು ತಾಲಿಬಾನಿಗರು ವಶಪಡಿಸಿಕೊಂಡ ಫೋಟೋಗಳನ್ನು ಜಾಲ ತಾಣಗಳಲ್ಲಿ ಹರಿಯಬಿಡಲಾಗಿದೆ.

ಅಫಘಾನಿಸ್ತಾನದ ಎನ್‌ಆರ್‌ಎಫ್‌ಎ- ನ್ಯಾಶನಲ್ ರೆಸಿಸ್ಟೆಂಟ್ ಫ್ರಂಟ್ ದಂಡು ಈ ಪ್ರದೇಶವನ್ನು ತನ್ನ ವಶ ಇರಿಸಿಕೊಂಡು ಇಲ್ಲಿಯವರೆಗೆ ತಾಲಿಬಾನಿಗರನ್ನು ತಡೆದು ನಿಲ್ಲಿಸಿತ್ತು.