ಫೆಬ್ರವರಿ 1ರಂದು ಮಿಲಿಟರಿಯು ನಾಗರಿಕ ಚುನಾಯಿತ ಸರಕಾರವನ್ನು ಕಿತ್ತೊಗೆದಾಗಿನಿಂದ ಮ್ಯಾನ್ಮಾರ್‌ನಲ್ಲಿ ನಿರಂತರ ಸಣ್ಣ ಸ್ಫೋಟಗಳು ಸಂಭವಿಸುತ್ತಲಿವೆ.
ಜನರ ಅಸಹಕಾರ ಚಳವಳಿ ಮುಂದುವರಿದಿದ್ದು, ಮಿಲಿಟರಿ ದಮನ ನಡೆಯೂ ಮುಂದುವರಿದಿದೆ. ಬಾಗೋದಲ್ಲಿ ನಿನ್ನೆ ನಡೆದ ಪಾರ್ಸೆಲ್ ಬಾಂಬ್ ಸ್ಫೋಟದಲ್ಲಿ ಐವರು ಮೃತರಾದರು. ಹಿಂದಿನ ಸರಕಾರದಲ್ಲಿ ಕಾನೂನು ರೂಪಿಸುವವರಾಗಿದ್ದ ಒಬ್ಬರು, ಒಬ್ಬ ನಾಗರಿಕ, ಮೂವರು ಪೋಲೀಸರು ಇದರಲ್ಲಿ ಜೀವ ತೆತ್ತವರಾಗಿದ್ದಾರೆ.