ಪೆರ್ಮನ್ನೂರ್:   ಸಂತ ಸೆಬೆಸ್ಟಿಯನ್ ದೇವಾಲಯ ಪೆರ್ಮನ್ನೂರ್ , ಕುಟುಂಬ ವರ್ಷದ ಕಾರ್ಯಕ್ರಮವಾಗಿ  ಸಂತ  ಸೆಬಾಸ್ಟಿಯನ್  ಸಭಾಂಗಣದಲ್ಲಿ  ದಂಪತಿಗಳಿಗೆ ಕಾರ್ಯಾಗಾರ O5.11. 2023 ರಂದು ನಡೆಯಿತು. ಧರ್ಮಕೇಂದ್ರದ ಪ್ರದಾನ ಧರ್ಮಗುರುಗಳಾದ ವಂ ಸಿಪ್ರಿಯನ್ ಪಿಂಟೊ ಪ್ರಾರ್ಥಾನಾ ವಿಧಿಯನ್ನು ನೇರವೆರಿಸಿ ಬಂದತಹ ಎಲ್ಲಾರನ್ನು ಸ್ವಾಗತಿಸಿದರು.  ಆಲ್ವಿನ್ ದಾಂತಿ ಪೆರ್ನಾಲ್ ರವರು ಕಾರ್ಯಗಾರವನ್ನು ನಡೆಸಿಕೊಟ್ಟರು. 

ಮುಖ್ಯ ಅತಿಥಿಗಳಾಗಿ  ವಂ ಗುರುಗಳಾದ ಅನಿಲ್ ಆಲ್ಪೆರ್ಡ್ ಡಿಸೋಜ, ಬಜ್ಜೋಡಿರವರು ದಂಪತಿಗಳಿಗೆ ಶುಭಾಶಾಯದ ಮಾತುಗಳಾನ್ನಾಡಿದರು.  ಸಹಾಯಕ ಧರ್ಮಗುರುಗಳಾದ ವಂ.ಸ್ವಾಮಿ  ಸ್ಪೀವನ್ ಕುಟಿನ್ಹೊ,  ಚರ್ಚ್ ಪಾಲನ ಪರಿಷತಿನ ಉಷಾದ್ಯಕ್ಷರದಾ  ಆರುಣ್ ಡಿಸೋಜ, ಕಾರ್ಯದರ್ಶಿ ಜ್ಯೋತಿ ಡಿಸೋಜ, ಅಯೋಗದ ಸಂಯೋಜಕ  ಡೊಲ್ಪಿ ಡಿಸೋಜ,  ಬೆಥೆಲ್ ಕಾನ್ವೆಂಟಿನ  ಧರ್ಮ ಭಗಿನಿ ಸಿಸ್ಟರ್ ಜೊಸೆಫ್ ಮೇರಿ, ನಿರ್ಮಲ ಕಾನ್ವೆಂಟಿನ ಧರ್ಮ ಭಗಿನಿ ಸಿಸ್ಟರ್  ಆಲ್ಪೊನ್ಸೊ, ಕುಟುಂಬ ಆಯೋಗದ ಸಂಚಾಲಕಿ ಬಬಿತಾ ತಾವ್ರೊ ಉಪಸ್ಥಿತರಿದ್ದರು. 25 ವರ್ಷ, 40 ವರ್ಷ. 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ 30 ಮಂದಿ ದಂಪತಿಗಳಿಗೆ ಸನ್ಮಾನಿಸಿದರು.  ವಂದನಾರ್ಪಣೆಯನ್ನು  ಬಬಿತಾ ತಾವ್ರೊ ,ಕಾರ್ಯಕ್ರಮ ನಿರ್ವಹಣೆಯನ್ನು  ಡೆಮಟ್ರಿಯಸ್ ಜಿ. ಡಿಸೋಜಾ  ನೆರವೇರಿಸಿದರು.  ಸುಮಾರು 435 ಜೋಡಿಗಳು ಭಾಗವಹಿಸಿದ್ದರು.  ಸರ್ವರಿಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಯಿತು.