ಹೇ ವರುಣ, ನಿನ್ನ ಮಿಲನದಿಂ

ಧರೆಯಾದಳು ಸಂಪೂರ್ಣ


ನೇಸರನ ವಿಸ್ತಾರತೆ ಅಳೆಯಲು

ಎಂದಾದರೆನೆಗೆ ಸಿಗುವುದೇ ಆಹ್ವಾನ


ತಿಳಿನೀಲಿ ಸೀರೆಯ ಮೇಲಿನ ಚಿತ್ತಾರ

ಬಿಡಿಸಿರುವವರು ರಜತ ಹಾಗೂ ಸುವರ್ಣ


ಮುನಿದ ಬಂಡೆಯ ಕೆಂಡಕೋಪವ

ಕಡಿಮೆ ಮಾಡುತಿಹಳು ಬಳುಕಿಸಿ ನೀರನ್ನ


ಶಾಂತ ಶೃಂಗಕ್ಕೆ ತುಂಟ ಮೇಘದ ಚುಂಬನ

ಅದ ಕಂಡು ನಾಚಿ ನೀರಾದೆ ನಾ


ಬಿಸಿಲ ತವರೂರು, ಹಸಿರೂರಾಗುತಿಹುದನ್ನು

ಕಂಡು ನಾನಾದೆ ರೋಮಾಂಚನ


ಇದು ಪ್ರಕೃತಿ ಎನ್ನೂರಿಗಿತ್ತ

ದೀಪಾವಳಿಯ ಉಡುಗೊರೆ ನಾ…?


By ಮಾಗಿದ ಮನಸ್ಸು