ರಾಫೆಲ್ ಯುದ್ಧ ವಿಮಾನ ಖರೀದಿ ಸಂಬಂಧ ಸುಶೇನ್ ಗುಪ್ತರಿಗೆ ಫ್ರಾನ್ಸಿನ ಡಾಸೋ ಏವಿಯೇಶನ್ ಕಂಪೆನಿಯು 65 ಕೋಟಿ ರೂಪಾಯಿ ಲಂಚ ನೀಡಿರುವ ಸ್ಪಷ್ಟ ಮಾಹಿತಿ ಅಕ್ಟೋಬರ್ 11ರಿಂದ ಲಭ್ಯವಿದ್ದರೂ ಸಿಬಿಐ ಮತ್ತು ಐಡಿ ತನಿಖೆ ಮಾಡುತ್ತಿಲ್ಲ ಎಂದು ವರದಿಯಾಗಿದೆ.

ನಾನಾ ದೇಶಗಳ ಇನ್‌ವಾಯ್ಸ್‌ಗಳ ಮೂಲಕ ಈ ಲಂಚ ಸಲ್ಲಿಕೆಯಾಗಿರುವುದಾಗಿ ಮೇಡಿಯಾ ವಿವರಿಸಿದೆ. ಈ ಗುಪ್ತ ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿಯಲ್ಲೂ ಲಂಚ ಹೊಡೆದಿದ್ದ ಎನ್ನಲಾಗಿದೆ.