ಮೂಡುಬಿದಿರೆ: ಫೆ. 1 ರಂದು ಉತ್ತರ ಪ್ರದೇಶ ಕಾಶಿಯಲ್ಲಿ ಭಗವಾನ್ ಪಾಶ್ವ೯ನಾಥ ಸ್ವಾಮಿ ಭಗವಾನ್ ಚಂದ್ರಪ್ರಭಸ್ವಾಮಿ ಗಂಗಾನದಿ ಕಿನಾರೆ ಫೆ. 2 ಮತ್ತು 3 ರಂದು ಭದೈನಿ ಜೈನ ಸ್ನಾನ ಘಟ್ಟದಲ್ಲಿ ಭಗವಾನ್ ಸುಪಾರ್ಶ್ವನಾಥ ಸ್ವಾಮಿ ಜನ್ಮ ಸ್ಥಾನದ ಪವಿತ್ರ ಬಸದಿ ಗಳ ದರ್ಶನ ಸ್ಯಾದ್ ವಾದ ಜೈನ್ ವಿದ್ಯಾಕೇಂದ್ರ ಹಾಗೂ ಬೇಲುಪುರ ಜೈನಬಸದಿ ಪಾರ್ಶ್ವ ಸಂಶೋದನಾ ಕೇಂದ್ರದಲ್ಲಿ ಪ್ರವಚನ ನೀಡಿದರು.
ಫೆ. 4 ರಂದು ಪಂಡರಾಪುರದ ಭಗವಾನ್ ಶ್ರೀ ಮುನಿಸುವ್ರತ ಸ್ವಾಮಿ ಪಂಚಕಲ್ಯಾಣ ಧಾರ್ಮಿಕ ಸಭೆ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.,
ಆಚಾರ್ಯ ವಿಶುದ್ಧಸಾಗರ ಮುನಿ ಮಹಾರಾಜ್ ಸಾನಿಧ್ಯದಲ್ಲಿ ಮೂರ್ತಿ ಪ್ರತಿಷ್ಠಾಪನೆ ಸಮವಸರಣ ಪೂಜೆ ನೆರವೇರಿತು. ಫೆ. 5 ರ ಬೆಳಿಗ್ಗೆ ಮುಂಬೈ ಗುಲಾಲ್ ವಾಡಿ ಪ್ರಾಚೀನ ಭಗವಾನ್ ಅದಿನಾಥ್ ಪಾರ್ಶ್ವನಾಥ ಸ್ವಾಮಿ ಮಾನಸ್ಥoಬಾ ಪಂಚಕಲ್ಯಾಣ ಕಾರ್ಯಕ್ರಮದ ತಪ ಕಲ್ಯಾಣಯುಗಳ ಮುನಿ ಅಮೋಘ ಕೀರ್ತಿ ಅಮರ ಕೀರ್ತಿ ದಿವ್ಯ ಸಾನಿಧ್ಯದಲ್ಲಿ ಅಜಾದ್ ಮೈದಾನದಲ್ಲಿ ನಡೆಯುತ್ತಿದ್ದು ಇಂದಿನ ಧಾರ್ಮಿಕ ಸಭೆಯಲ್ಲಿ ಆಚಾರ್ಯ ಶಾಂತಿಸಾಗರ ಆಚಾರ್ಯ ಪದಶತಾಬ್ದಿ ನಿಮಿತ್ತ ಚಿತ್ರ ಅನಾವರಣ ದೀಪ ಬೆಳಗಿಸಿ ಉದ್ಘಾಟಿಸಿ ಭಾರತೀಯ ಧರ್ಮ ಸನಾತನ ಧರ್ಮದಲ್ಲಿ ಸಂಸ್ಕಾರ, ತಪಸ್ಸು ನಿಯಮಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ ಕರ್ಮಕಳೆದು ಶುದ್ಧರಾಗಲು ಮನಸು ಪರಿಶುದ್ಧವಾಗಬೇಕು ಅರಿಷಡ್ ವರ್ಗ ತಿಳಿದು ದ್ವೇಷ ಅಸೊಯೆ ತೊರೆದಾಗ ಮನಸು ಶುದ್ಧವಾಗುದು ಸಾತ್ವಿಕ ನಿಯಮಿತ ಆಹಾರ ಸೇವನೆಯಿಂದ ದೇಹದ ಅರೋಗ್ಯ ಸುಧಾರಣೆಯಾಗುದು ತಪಸ್ಸು ಈ ಎರಡರ ಸಮಸ್ಯೆಗೆ ಪರಿಹಾರ ನೀಡುದರೊಂದಿಗೆ ಪರಿಸರ ಜೀವ ಆಜೀವ ಜಗತ್ತಿನಲ್ಲಿ ಮಾನವ ಜೀವನದ ಕಲ್ಯಾಣ ಹೇಗೆ ಸಾಧ್ಯ ಎಂದು ನಿರೂಪಿಸಿ ಆದ್ಯಾತ್ಮಿಕತೆ ಅಳವಡಿಸಿ ನೆಮ್ಮದಿಯ ಜೀವನ, ಸುಖ, ಶಾಂತಿಯ ಉಪಾಯ ತಿಳಿಸಿ ಮಹಾದುಪಕಾರ ಮಾಡಿವೆ ಎಂದರು.
ಭರತ್ ಶಾ, ವಜ್ರ ವ್ಯಾಪಾರಿ ಭರತ ಜೈನ್, ಅನಿಕ್ ಜೈನ್, ಶರದ್ ದೋಟಿಯಾ ಮೊದಲಾದವರು ಯುಗಳ ಮುನಿವರ್ಯರ ಹಾಗೂ ಮೂಡುಬಿದಿರೆ ಸ್ವಾಮೀಜಿ ಪಾದ ಪೂಜೆ ನೆರವೇರಿಸಿ ಆಶೀರ್ವಾದ ಪಡೆದರು.