ಭ್ರಷ್ಟಾಚಾರದ ಕಾರಣಕ್ಕೆ ಯಡಿಯೂರಪ್ಪನವರನ್ನು ಬೆದರಿಸಿ ರಾಜೀನಾಮೆ ಪಡೆದಿದ್ದಾರೆ. ಯಾರು ಬಂದರೇನು, ಬಿಜೆಪಿ ತೊಲಗದೆ ಕರ್ನಾಟಕಕ್ಕೆ ಸುಖವಿಲ್ಲ ಎಂದು ಮಾಜೀ ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಹೇಳಿದರು.
ಅಕ್ರಮ ಸಂತಾನವಾದ ಈ ಸರಕಾರ ಇರುವುದೇ ತಪ್ಪು. ಮುಖ್ಯಮಂತ್ರಿ ಬದಲಾಗುವುದರಿಂದ ರಾಜಕೀಯ ಬಿಜೆಪಿಯ ಜಾತಿ ರಾಜಕೀಯ ಮತ್ತು ಲೂಟಿ ನಿಲ್ಲದು. ಬಿಜೆಪಿ ಎಂದರೇನೇ ಭ್ರಷ್ಟಾಚಾರ ಜಾರಿ ಪಕ್ಷ ಎಂದು ಸಿದ್ದರಾಮಯ್ಯನವರು ಹೇಳಿದರು.