2014ರಲ್ಲಿ ಪಿಯು ವಿದ್ಯಾರ್ಥಿನಿಯನ್ನು ಅಪಹರಿಸಿ, ಲಾಡ್ಜ್‌ನಲ್ಲಿ ಬಂಧಿಸಿಟ್ಟು ಅತ್ಯಾಚಾರ ನಡೆಸಿದ್ದ ಇರ್ಫಾನ್ ಎಂಬವನಿಗೆ ಮಂಗಳೂರು 1ನೇ  ಹೆಚ್ಚುವರಿ ಸೆಶನ್ಸ್ ನ್ಯಾಯಾಲಯವು 7 ವರುಷಗಳ ಕಠಿಣ ಶಿಕ್ಷೆ ನೀಡಿದೆ.

ಪ್ರೀತಿ ಪ್ರೇಮದ ಹೆಸರಿನಲ್ಲಿ 17ರ ಬಾಲಕಿಯನ್ನು ಮರುಳು ಮಾಡಿದ್ದ. ಅನಂತರ ಚಿಕ್ಕಮಗಳೂರಿಗೆ ಅಪಹರಿಸಿ ಲಾಡ್ಜ್‌ನಲ್ಲಿ ಕೂಡಿಹಾಕಿ ಅತ್ಯಾಚಾರ ನಡೆಸಿದ್ದ.

ಉಲ್ಲಾಳ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು. ಪೋಲೀಸರು ಕೊನೆಗೂ ಇರ್ಫಾನ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.