ತಂಗಿಗೆ ಸಹಕಾರ ಸಂಘದಲ್ಲಿ ಸಾಲ ಮಾಡಿ ಮೊಬಾಯಿಲ್ ಕೊಡಿಸುವ ವಿಚಾರವಾಗಿ ಜಗಳವಾಡಿದ ಯುವಕನೊಬ್ಬ ತಾಯಿ ಮತ್ತು ತಂಗಿಯನ್ನು ನಾಡ ಬಂದೂಕಿನಿಂದ ಗುಂಡಿಟ್ಟು ಕೊಂದ ಅಮಾನವೀಯ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಕುಡೇಗೋಡಿನಲ್ಲಿ ನಡೆದಿದೆ.

42ರ ಪ್ರಾಯದ ಪಾರ್ವತಿ ನಾರಾಯಣ ಹಸ್ಲರ್ ಮತ್ತು 20ರ ರಮ್ಯಾ ನಾರಾಯಣ ಹಸ್ಲರ್ ಕೊಲೆಯಾದವರು. ಕೊಲೆ ಆರೋಪಿ 24ರ ಮಂಜುನಾಥ ನಾರಾಯಣ ಹಸ್ಲರ್‌ನನ್ನು ಪೋಲೀಸರು ಬಂಧಿಸಿದ್ದಾರೆ.

ಕುಡಿತ ಮತ್ತು ನಾಡ ಕೋವಿಯೊಡನೆ ಶಿಕಾರಿಯ ಚಟ ಇದ್ದ ಮಂಜುನಾಥ ಬೇಟೆಗೆ ಹೋಗುವುದಕ್ಕೆ ಮುಂಚೆ ಜಗಳವಾಡಿದ್ದ. ಹಿಂತಿರುಗಿ ಬಂದವನು ಸಹ ಜಗಳವಾಡಿ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ತನಿಖೆ ನಡೆದಿದೆ.