ಮಾಂಡ್ ಸೊಭಾಣ್ ಪ್ರಸ್ತುತಪಡಿಸುವ ಕೊಂಕಣಿಯ ಬಹು ದೊಡ್ಡ ಗಾಯನ ರಿಯಾಲಿಟಿ ಸ್ಪರ್ಧೆ `ಎಂಸಿಸಿ ಬ್ಯಾಂಕ್ ಲಿ. ಸೋದ್-5 ಮ್ಯಾಂಗೋವಾ' ಟಾಪ್ 10 ಹಂತಕ್ಕೆ ತಲುಪಿದೆ. ವಿವಿಧ ಐದು ಹಂತಗಳಲ್ಲಿ ಕಠಿಣ ಸ್ಪರ್ಧೆಯನ್ನು ಎದುರಿಸಿ, ಕೊಂಕಣಿಯ ದಿಗ್ಗಜ ತೀರ್ಪುದಾರರ ಆಯ್ಕೆ ಪ್ರಕ್ರಿಯೆಯಿಂದ ಟಾಪ್ 10 ಹಂತಕ್ಕೆ ಆಯ್ಕೆಗೊಂಡವರ ಹೆಸರುಗಳು ಇಂತಿವೆ. ಜೇಸನ್ ಲೋಬೊ, ಬೊಂದೆಲ್; ವೈಭವ್ ವಿಶ್ವಾಸ್ ಕಾಮತ್, ಗೋವಾ; ರೈನಲ್ ಸಿಕ್ವೇರಾ, ಕುಲ್ಶೇಕರ; ಮಾರ್ವೆಲ್ ಕ್ರಿಸ್ಟನ್ ಡಿಸೋಜ, ಉಡುಪಿ; ಜೀವನ್ ಬಸ್ತ್ಯಾಂವ್ ಸಿದ್ದಿ, ಮುಂಡಗೋಡ ಹಾಗೂ ಗಾಯಕಿಯರಾದ ಲೀಶಾ ಗ್ರೇಟಲ್ ಡಿಸಿಲ್ವಾ, ದೇರೆಬೈಲ್, ಸೋನಲ್ ಆಗ್ನೆಸ್ ಮೊಂತೇರೊ, ಕುಲ್ಶೇಕರ, ಲವೀಟಾ ರೊಲಿಟಾ ಡಿಸೋಜ, ತೊಕ್ಕೊಟ್ಟು, ಟ್ರೀಜಾ ಲೊಪೆಸ್, ಹೊನ್ನಾವರ ಮತ್ತು ಕ್ಯಾರಲ್ ಪ್ರೀಮಾ ಸಿಕ್ವೇರಾ, ವಾಲೆನ್ಸಿಯಾ ಇವರುಗಳು ಆಯ್ಕೆಯಾಗಿದ್ದಾರೆ. ಟಾಪ್ 10 ವಿಜೇತರಿಗೆ ನೆಲ್ಸನ್ ರೊಡ್ರಿಕ್ಸ್ ಪ್ರಾಯೋಜಿತ ತಲಾ ರೂ.10,000/- ನಗದು ಮತ್ತು ಪ್ರಮಾಣ ಪತ್ರ ದೊರೆಯಲಿದೆ.

ಇನ್ನು ಸೂಪರ್ ಸಿಕ್ಸ್ ಮತ್ತು ಫೈನಲ್ ಫೊರ್ ಹಂತಗಳಿದ್ದು, ಅಂತಿಮವಾಗಿ ಓರ್ವ ಗಾಯಕ `ರಾಯ್ ಕೊಗುಳ್' ಮತ್ತು ಗಾಯಕಿ 'ರಾಣಿ ಕೊಗುಳ್' ಆಗಿ ಆಯ್ಕೆಯಾಗಲಿದ್ದಾರೆ. ಇವರಿಗೆ ರೂ. 50,000/- ನಗದು ಮತ್ತು ಬಿರುದು ಲಭಿಸಲಿದೆ. ವಿಜೇತರಿಗೆ ಪ್ರತಿಷ್ಟಿತ ಎಸ್ಕೆಎ, ಲಂಡನ್ ಸಂಘಟನೆಯ ಒಂದು ಕಾರ್ಯಕ್ರಮಕ್ಕೆ ಲಂಡನ್ಗೆ ತೆರಳುವ ಅವಕಾಶ ಲಭಿಸಲಿದೆ. ಈ ಹತ್ತು ಗಾಯಕರಿಂದ ತಿಂಗಳ ವೇದಿಕೆ ಸರಣಿಯ 239 ನೇ ಕಾರ್ಯಕ್ರಮವಾಗಿ, ಆಕ್ಟೋಬರ್’ನಲ್ಲಿ ಸಂಗೀತ ರಸಮಂಜರಿ ನಡೆಯಲಿದೆ.

2020 ಫೆಬ್ರವರಿ 16 ರಂದು ಕಲಾಂಗಣದಲ್ಲಿ ಆರಂಭವಾದ ಈ ಸಂಗೀತ ಪಯಣದಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಂಗಳೂರು ಮತ್ತು ಗೋವಾ ಹಾಗೂ ಕೇರಳದಿಂದ ಒಟ್ಟು 175 ಮಂದಿ ಆಡಿಷನ್ ನೀಡಿದ್ದರು. ಈ ಮೊದಲಿನ ಸೋದ್ ಆವೃತ್ತಿಗಳು 2005,2008,2011 ಮತ್ತು 2014 ರಲ್ಲಿ ನಡೆದಿವೆ.