ಮೂಡುಬಿದಿರೆ: ಸ್ವಾಮೀಜಿ ಮಾರ್ಗದರ್ಶನ ಉಪಸ್ಥಿತಿ, ಆಶೀರ್ವಾದಗಳೊಂದಿಗೆ ಜರುಗಿತು ಅಪರಾಹ್ನ 1.30ರಿಂದ ಕಲಿಕುಂಡ ಆರಾಧನೆ, ಸರಸ್ವತಿ ಅಷ್ಟಾವದಾನ ನೆರವೇರಿಸಿ ಸಂಜೆ ಧಾರ್ಮಿಕ ಸಭೆಯಲ್ಲಿ ಆಶೀರ್ವಾದ ಮಾಡಿದ ಶ್ರೀ ಜೈನಮಠ ಮೂಡುಬಿದಿರೆ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ವರ್ಯಮಹಾ ಸ್ವಾಮೀಜಿ ಇಲ್ಲಿಯ ಪರಮಾಗಮ ಧವಲತ್ರಯ, ಷಟ್ ಖಂಡ ಆಗಮ ವಿಶ್ವ ಮಾನ್ಯ ಹಿಂದಿನ ಎಲ್ಲಾ ಪಟ್ಟಾ ಚಾರ್ಯರು ಈ ಕ್ಷೇತ್ರದಲ್ಲಿ ಶಾಸ್ತ್ರ ಸಂರಕ್ಷಣೆ ಕ್ಷೆತ್ರ ಅಭಿವೃದ್ಧಿ ನಿರಂತರ ನೆರವೇರಿಸಿ ಆದರ್ಶ ಪ್ರಾಯರಾಗಿದ್ದಾರೆ ಆ ಪರಂಪರೆಯನ್ನು ನಾವು ಸಮಾಜದ ಸಹಕಾರದಿಂದ ಮುಂದುವರೆಸುತ್ತಿದ್ದೇವೆ.
ಕಳೆದ 24ವರ್ಷಗಳಿಂದ ಪ್ರತಿ ವರ್ಷ ಶ್ರುತ ಪಂಚಮಿ ನಿಮಿತ್ತ ವಿಧ್ವಾoಸರನ್ನು ಗುರುತಿಸಿ ಗೌರವಿಸಲಾಗುತ್ತದೆ, ಆರಾಧನೆ ಪೂಜೆ ಭಕ್ತಿ ಉಸ್ಸವಗಳೊಂದಿಗೆ ನಮ್ಮ ಪ್ರಾಚೀನ ಗ್ರಂಥ ಹಸ್ತ ಪ್ರತಿ ಶಾಸ್ತ್ರಗಳ ಅಧ್ಯಯನ ಅಧ್ಯಾಪನ ವಿಚಾರ ಆಚಾರಗಳ ಪ್ರಚಾರ ಗ್ರಂಥ ಸಂರಕ್ಷಣೆ ಹಾಗೂ ಪ್ರಚಾರ ಪ್ರಸಾರವೊ ನಮ್ಮೆಲ್ಲರ ಕರ್ತವ್ಯ ಅದಕ್ಕಾಗಿ ಶಾಸ್ತ್ರ ದಾನವು ಪ್ರತಿಯೊಬ್ಬರು ಮಾಡುದರಿಂದ ಜ್ಞಾನದ ಧರ್ಮದ ರಕ್ಷಣೆ ಸಾಧ್ಯ ಎಂದು ನುಡಿದರು.
ಮಂಡ್ಯ ಆರತಿ ಪುರ ಸ್ವಸ್ತಿಶ್ರೀ ಸಿದ್ಧಾಂತ ಕೀರ್ತಿ ಸ್ವಾಮೀಜಿ ಉಪಸ್ಥಿತರಿದ್ದು ಆಶೀರ್ವಾದ ನೀಡಿದರು. ಉಭಯ ಶ್ರೀಗಳ ಪಾದ ಪೂಜೆ ನೆರವೇರಿತು.
ಶ್ರೀ ದೇವಚಂದ್ರ ಜೋಯ್ಸ್,ಭುವನ ಹಳ್ಳಿ ಸಾಲಿಗ್ರಾಮ ಮೈಸೂರ್ ಇವರಿಗೆ ಪ್ರತಿಷ್ಠಾಚಾರ್ಯ ಪ್ರಶಸ್ತಿ ನೀಡಿ ಸ್ವಾಮೀಜಿ ಗೌರವಿಸಿ ಹರಸಿ ಆಶೀರ್ವಾದಿಸಿದರು. ಈ ಬಾರಿಯ ಜಿನ ವಾಣಿ ಪುರಸ್ಕಾರ 2023 ಮೈಸೂರ್ ನ ಹಿರಿಯ ಅಧ್ಯಾಫಿಕೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಪದ್ಮಾ ಮೈಸೂರ್, ಚಿತ್ರ ಕಲಾವಿದೆ ವೀಣಾ ಚಂದನ್, ಪ್ರಾಕೃತ ಉಪನ್ಯಾಸಕ ರಮೇಶ್ ಶಾಸ್ತ್ರೀ, ಬಾಬಾ ನಗರ ಮೈಸೂರ್ ಇವರಿಗೆ ನೀಡಲಾಯಿತು.
ಸುಧಾ ಪಾರ್ಶ್ವನಾಥ, 83 ಬಾರಿ ಸಿದ್ದ ಕ್ಷೇತ್ರ ಶಿಖರ್ಜಿಕ್ಷೆತ್ರ ದರ್ಶನ ಮಾಡಿದ ವಿನಯ್ ಪ್ರಸಾದ್ ಪಡoಗಡಿಯವರಿಗೆ ಅಭಿನಂದನಾ ಪತ್ರ ನೀಡಿ ಸ್ವಾಮೀಜಿ ಸರ್ವರನ್ನೂ ಹರಸಿ ಆಶೀರ್ವಾದ ಮಾಡಿದರು.
ಈ ಸಂಧರ್ಭ ಸ್ಥಾನೀಯ ಈ ಬಾರಿಯ ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಾದ ಮೇಘನಾ, ಖ್ಯಾತಿ, ಪೂಜಿತ್, ಪ್ರಮೆಯಿ ಧವಳತ್ರಯ ಜೈನ ಕಾಶಿ ಟ್ರಸ್ಟ್ ಹಾಗೂ ಶ್ರೀ ಜೈನ ಮಠ ಟ್ರಸ್ಟ್ ಮೂಲಕ ಪ್ರತಿಭಾ ಪುರಸ್ಕಾರ ನೀಡಿ ಹರಸಿ ಆಶೀರ್ವಾದ ಮಾಡಿದರು.
ಸಂಜೆ 5.30ರಿಂದ ಜೈನ ಶ್ರಾವಕ ಶ್ರಾವಿಕೆಯರಿಂದ ಸರಸ್ವತಿ ಪೂಜೆ ಆರತಿ ಶ್ರೀಮಠದಿಂದ ರಜತ ಪೆಟ್ಟಿಗೆಯೊಳಗೆ ಇಟ್ಟಿರುವ ಪರಮ ಪುನೀತ ಜೈನ ಆಗಮ ಗಳಾದ ದವಳತ್ರಯ ಗ್ರಂಥಗಳ ಮೆರವಣಿಗೆಯಲ್ಲಿ ಗುರು ಬಸದಿ ಮೂಲಕ ಬಸದಿ ಬೀದಿ ಜೈನಪೇಟೆ ಮೂಲಕ ಸಾಗಿ ವಾಪಸ್ಸು ಶ್ರೀ ಮಠಕ್ಕೆ ಪೂರ್ಣ ಕುಂಭ ಸ್ವಾಗತ ಮಾಡಿ ಬರಮಾಡಿ ಕೊಳ್ಳಲಾಯಿತು.
ಪಟ್ಣ ಶೆಟ್ಟಿ ಸುಧೀಶ್ ಕುಮಾರ್, ದಿನೇಶ್ ಕುಮಾರ್, ಆದರ್ಶ್ ಮುಕ್ತೇಸರರು, ಶಂಭವ್ ಕುಮಾರ್, ಪ್ರವೀಣ್ ಚಂದ್ರ, ವಿನಯ್ ಕುಮಾರ್,ಪುತ್ತಿಲ ಜಯರಾಜ್, ವಿತೇಶ್ ಬಾಹುಬಲಿ ಪ್ರಸಾದ್ ಮಹಿಳಾ ಸಂಘದ ಸಮಸ್ತರು ವಿವಿಧ ಸಂಘಟನೆಗಳ ಪ್ರಮುಖರು ಮೂಡು ಬಿದಿರೆ ಉಪಸ್ಥಿತರಿದ್ದರು.