ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ, ಕನ್ನಡವೇ ನಿತ್ಯ" - ಇದು ರಾಷ್ಟ್ರಕವಿ, ಮಹಾಕವಿ ಕುವೆಂಪು ಅವರು ರಚಿಸಿದ ಗೀತೆಯ ಮೊದಲ ಸಾಲುಗಳು. ಈ ಸಾಲುಗಳೇ ಒತ್ತಿ ಹೇಳುತ್ತವೆ ಎಲ್ಲಿ ಇದ್ದರೂ ಹೇಗೆ ಇದ್ದರೂ ನಮ್ಮ ಮಾತೃಭಾಷೆ ಕನ್ನಡ ಬಗ್ಗೆ ಹೆಮ್ಮೆ ಗೌರವದಿಂದ ಕನ್ನಡಿಗರೇ ಆಗಿರಬೇಕು ಎಂದಿಂದಿಗೂ ಎಂದು.ನಮ್ಮ ಕರ್ನಾಟಕವನ್ನು ಕನ್ನಡ ನಾಡು, ಕರುನಾಡು, ಶ್ರಿಗಂಧದ ನಾಡು ಎಂದೂ ಕರೆಯಲಾಗುತ್ತದೆ. 

ನಮ್ಮ ರಾಜ್ಯಕ್ಕೆ ಮೊದಲು ಮೈಸೂರು ರಾಜ್ಯ ಎಂದು ಕರೆಯಲಾಗುತ್ತಿತ್ತು.ಆಲೂರು ವೆಂಕಟರಾವ್ ಅವರು 1905 ರಲ್ಲಿಯೇ ಕರ್ನಾಟಕ ಏಕೀಕರಣ ಚಳುವಳಿಯೊಂದಿಗೆ ರಾಜ್ಯವನ್ನು ಏಕೀಕರಿಸುವ ಕನಸು ಕಂಡ ಮೊದಲ ವ್ಯಕ್ತಿ 1950 ರಲ್ಲಿ ಭಾರತವು ಗಣರಾಜ್ಯವಾಯಿತು. ಆ ಬಳಿಕ ನಿರ್ದಿಷ್ಟ ಪ್ರದೇಶದಲ್ಲಿ ಮಾತನಾಡುವ ಭಾಷೆಯ ಆಧಾರದ ಮೇಲೆ ದೇಶದಲ್ಲಿ ವಿವಿಧ ರಾಜ್ಯಗಳು ರಚನೆಯಾಗಲು ಆರಂಭವಾಯಿತು. ಅಂತೆಯೇ 1956ರ ನವೆಂಬರ್‌ 1ರಂದು ವಿವಿಧ ಪ್ರದೇಶಗಳಲ್ಲಿ ಕನ್ನಡ ಮಾತನಾಡುತ್ತಿದ್ದ ಜನರನ್ನು ಒಗ್ಗೂಡಿಸಿ ಮೈಸೂರು ರಾಜ್ಯ ರಚನೆಯಾಯಿತು. 1973ರ ನವೆಂಬರ್‌ 1ರಂದು ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಾಯಿಸಲಾಯಿತು.ಕರ್ನಾಟಕದ ಏಕೀಕರಣಕ್ಕೆ ಮನ್ನಣೆ ನೀಡಿದ ಇತರ ವ್ಯಕ್ತಿಗಳಲ್ಲಿ ಸಾಹಿತಿಗಳಾದ ಕೆ. ಶಿವರಾಮ ಕಾರಂತ್, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್. ಕೃಷ್ಣರಾವ್ ಮತ್ತು ಬಿ.ಎಂ.ಶ್ರೀಕಂಠಯ್ಯ ಸೇರಿದ್ದಾರೆ.

ಪ್ರತಿ ವರ್ಷ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ನಾಡ ಹಬ್ಬವಾಗಿ ಆಚರಿಸುತ್ತಾರೆ ನಮ್ಮ ನಾಡ ದೇವಿ ಭುವನೇಶ್ವರಿ. ಕುವೆಂಪು ರಚನೆಯ 'ಜಯ ಭಾರತ ಜನನೀಯ ತನುಜಾತೆ. ಜಯಹೇ ಕರ್ನಾಟಕ ಮಾತೆ' ಗೀತೆಯು ನಮ್ಮ ನಾಡಗೀತೆಯಾಗಿದೆ. ನಮ್ಮ ರಾಜ್ಯದ ಬಾವುಟ ಹಳದಿ ಮತ್ತು ಕೆಂಪು ಬಣ್ಣದಿಂದ ಕೂಡಿದೆ. ಕನ್ನಡ ಹೋರಾಟಗಾರ ಎಂ ರಾಮಮೂರ್ತಿ ಅವರು ಹಳದಿ ಹಾಗೂ ಕೆಂಪು ಬಣ್ಣದಿಂದ ಕೂಡಿದ ಬಾವುಟವನ್ನು ಸಿದ್ದಪಡಿದ್ದರು. ಹಳದಿ ಶಾಂತಿ ಮತ್ತು ಸೌಹಾರ್ದತೆ ಸೂಚಿಸುತ್ತದೆ. ಕೆಂಪು ಬಣ್ಣವು ಕ್ರಾಂತಿಯ ಸಂಕೇತವಾಗಿದೆ.

ಭಾರತದ ಒಟ್ಟು ಭೌಗೋಳಿಕ ಪ್ರದೇಶದ ಶೇಕಡಾ 5.83 ರಷ್ಟು ವಿಸ್ತೀರ್ಣವನ್ನು ಹೊಂದಿದೆ. ಇದು ವಿಸ್ತೀರ್ಣದಲ್ಲಿ ಆರನೇ ಅತಿ ದೊಡ್ಡ ಭಾರತೀಯ ರಾಜ್ಯವಾಗಿದೆ ಕರ್ನಾಟಕದಲ್ಲಿ 31 ಜಿಲ್ಲೆಗಳಿವೆ .ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಆವತ್ತು ಎಲ್ಲಾಕಡೆ ಹಬ್ಬದ ವಾತಾರಣವಿರುತ್ತದೆ ನಮ್ಮ ನಾಡಿನ ಬಗ್ಗೆ ಭಾಷೆಯ ಬಗ್ಗೆ ಆ ದಿನಕ್ಕೆ ಮಾತ್ರ ನಮ್ಮ ಪ್ರೀತಿ ಸೋಷಿಯಲ್ ಮೀಡಿಯಾದಲ್ಲಿ ಕಂಗೂಳಿಸದೇ ಸದಾಕಾಲ ಮನದಲ್ಲಿ ತುಂಬಿ ತುಳುಕಳಿ ಹಚ್ಚಹಸುರಿ ನಾಡು ಸುಂದರ ಬೆಟ್ಟ ಗುಡ್ಡಗಳು ಬೀಡು ನದಿಗಳು ಹರಿಯುವ ಕಾಡು ಸಾಧು-ಸಂತರು-ದಾಸರು- ಶಿವಶರಣರು - ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡು ಎಂಬ ಹೆಸರಿಗೆ ಒಂದು ಧೀಮಂತ ಶಕ್ತಿ ಇದೆ. ಈ  ನಾಡಿನ ಕೀರ್ತೀ ಮುಗಿಯೆತ್ತೇರಕ್ಕೆ ಏರಲಿ ಈ ಸುಂದರ, ಸಮೃದ್ಧ ನಾಡಿನಲ್ಲಿ ಜನಿಸಿರುವುದು ನಮ್ಮೆಲ್ಲರ ಅದೃಷ್ಟ.  ಎನ್ನ ನಾಡು ಕನ್ನಡ ನಾಡು ಎಂದು ಹೆಮ್ಮೆಯಿಂದ ಹೇಳುವೆ ಎಲ್ಲಾರಿಗೂ ಕನ್ನಡ ರಾಜ್ಯೋತ್ಸದ ಹಾರ್ದಿಕ್ ಶುಭಾಶಯಗಳು. 


ರೇಷ್ಮಾ ಶೆಟ್ಟಿ