ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆಕಳೆದ ಒಂದು ವಾರದ ಹಿಂದೆ ಮಾಧ್ಯಮದಲ್ಲಿ ಫೋಟೋ ವರದಿ ಪ್ರಕಟವಾದ ತರುವಾಯ ತಕ್ಷಣ ಎಚ್ಚೆತ್ತುಕೊಂಡ ಮೂಡುಬಿದರೆ ಪುರಸಭೆಯ ಅಧಿಕಾರಿಗಳು ಶೀಘ್ರದಲ್ಲಿ ತಂಗುದಾಣದಲ್ಲಿ ಕಿತ್ತು ಹೋಗಿರುವ ರಚನೆಗಳನ್ನು ಹೊಸದಾಗಿ ನಿರ್ಮಿಸುವ ಕೆಲಸ ಮಾಡಿರುತ್ತಾರೆ. ಆದರೆ ತಲೆಯ ಮೇಲಿನ ಸೂರು ಸಮರ್ಪಕಗೊಂಡಿದ್ದರು ಕೂಡ ಅದರ ಅಡಿ ಇರುವ ಸಿಮೆಂಟ್ ನ ರಚನೆಗಳು ಕಿತ್ತು ಹೋಗಿರುವ, ಹೊಂಡ ಗುಂಡಿಗಳು ಹಾಗೆಯೇ ಉಳಿದಿವೆ. ಚಿಕ್ಕ ಮಕ್ಕಳು ಹೊಂಡಗಳಲ್ಲಿ ಕಾಲಿಟ್ಟು ಮುಗ್ಗರಿಸುತ್ತಿದ್ದಾರೆ. 

ರಿಂಗ್ ರಸ್ತೆಯ ಅವ್ಯವಸ್ಥೆ: ಅಲಂಗಾರಿನಿಂದ ಮೂಡುಬಿದರೆ ಮಂಗಳೂರಿಗೆ ಹೋಗಲು ಬರಲು ಇರುವ ರಿಂಗ್ ರಸ್ತೆ ಹೊಂಡ ಗುಂಡಿಗಳಿಂದ ಮತ್ತೆ ಉಪಯೋಗ ರಹಿತವಾಗಿ ಬದಲಾಗಿದೆ. ಮೂಡುಬಿದರೆಯ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗಳು ಈ ಬಗ್ಗೆ ತಕ್ಷಣ ಮೂಡುಬಿದಿರೆಯನ್ನು ಸಂಪರ್ಕಿಸುವ ಎಲ್ಲ ರಸ್ತೆಗಳಲ್ಲಿ ಆಗಿರುವ ಹೋಂಡಗುಂಡಿಗಳನ್ನು ಉತ್ತಮ ಗುಣಮಟ್ಟದ ಡಾಮರ್ ಹಾಕಿ ಸರಿಪಡಿಸಬೇಕಾದ ಅಗತ್ಯವಿದೆ. ಏಕೆಂದರೆ ಕೆಲವಾರು ಕಡೆಗಳಲ್ಲಿ ಹಾಕಿದ ಒಂದೇ ವಾರಗಳಲ್ಲಿ ಪುನಃ ಗುಂಡಿ ರಚನೆಯಾಗಿದೆ. ಈ ಬಗ್ಗೆ ಶಾಸಕರು ಗಮನ ಹರಿಸಬೇಕೆಂದು ನಾಗರಿಕರು ಕೇಳಿಕೊಳ್ಳುತ್ತಿದ್ದಾರೆ.