ಮಂಗಳೂರು: ನೀವು ಬಳಸಿ ಸುಸ್ಥಿತಿಯಲ್ಲಿರುವ ಪಾದರಕ್ಷೆಗಳನ್ನು ನಮಗೆ ತಲುಪಿಸಬಹುದು.   ಫಾರ್ಮಲ್ ಶೂಸ್, ಸ್ಪೋರ್ಟ್ಸ್ ಶೂಸ್, ಸ್ಲಿಪ್ಪರ್ಸ್, ಸ್ಯಾಂಡಲ್ಸ್, ಫೋಮ್ ಶೂಸ್, ರಬ್ಬರ್ಸ್ ಶೂಸ್   ಹೀಗೆ ಯಾವುದೇ ತರಹದ ಪಾದರಕ್ಷೆಗಳನ್ನು ಸ್ವೀಕರಿಸಲಾಗುವುದು. 

ಪಾದರಕ್ಷೆಗಳನ್ನು ಸ್ವೀಕರಿಸುವ ಸ್ಥಳ : ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಕಚೇರಿ , ಮಣ್ಣಗುಡ್ಡ ಗಾಂಧಿ ಪಾರ್ಕ ಮುಂದುಗಡೆ , ಹೈ ಹೀಲ್ಡ್ , ಪಾಯಿಂಟೆಡ್ ,  10 ವರ್ಷದ ಒಳಗಿನ ಮಕ್ಕಳ ಫುಟ್ ವೇರ್ ಗಳನ್ನು ಸ್ವೀಕರಿಸಲಾಗುವುದಿಲ್ಲ .  ಸಂಗ್ರಹವಾದ ಪಾದರಕ್ಷೆಗಳನ್ನು ಮುಂಬೈ ನ  ಪ್ರತಿಷ್ಠಿತ  ಗ್ರೀನ್ ಸೊಲ್ ಸಂಸ್ಥೆಗೆ  ರಾ ಮೆಟೀರಿಯಲ್ಸ್  ರೂಪದಲ್ಲಿ ನೀಡಲಾಗುವುದು. 

ಅವರು ಇದರಿಂದ ಹೊಸ ಆರಾಮದಾಯಕ ಸ್ಲಿಪ್ಪರ್ಸ್ ಗಳನ್ನು ತಯಾರಿಸಿ ದೇಶದಾದ್ಯಂತ ಇರುವ ಅಶಕ್ತರಿಗೆ, ಪಾದರಕ್ಷೆ ರಹಿತರಿಗೆ ಉಚಿತವಾಗಿ ನೀಡುತ್ತಾರೆ. ಇಡೀ ಸಮುದಾಯ ಭಾಗವಹಿಸುವ ಕರಾವಳಿ ಕರ್ನಾಟಕದ ಪ್ರಪ್ರಥಮ ವಿನೂತನ ಅಭಿಯಾನ ಇದಾಗಿದೆ. ನಿಮ್ಮೆಲ್ಲರ ಭಾಗವಹಿಸುವಿಕೆಯಿಂದ ಈ ಚಟುವಟಿಕೆ ಮತ್ತಷ್ಟು ಕಳೆಗಟ್ಟಲಿದೆ. ಬನ್ನಿ, ಭಾಗಿಯಾಗೋಣ…