ಚೀನಾ ಜನ ಪ್ರಜಾಪ್ರಭುತ್ವದ ಹಾಂಗ್‌ಜೌನಲ್ಲಿ ನಡೆಯುತ್ತಿರುವ ಏಶಿಯನ್ ಕ್ರೀಡಾಕೂಟ 19ರಲ್ಲಿ ಭಾರತವು ಮೂರು ತಂಡ ಚಿನ್ನಗಳನ್ನು ಗಳಿಸಿತು. 1982ರಲ್ಲಿ ದಿಲ್ಲಿಯಲ್ಲಿ ನಡೆದ ಏಶಿಯನ್ ಗೇಮ್ಸ್‌ನಲ್ಲಿ ಭಾರತ ಕುದುರೆ ಸವಾರಿ ಚಿನ್ನ ಗೆದ್ದಿತ್ತು. 41 ವರುಷಗಳ ಬಳಿಕ ಸುದೀಪ್ತಿ ಹಜೇಲಾ, ದಿವ್ಯಾಕೃತಿ ಸಿಂಗ್, ಹೃದಯ್ ವಿಪುಲ್ ಚೇಡಾ, ಅನುಶ್ ಅಗರ್ವಾಲ್ ಅವರುಗಳು ಈಕ್ವೆಸ್ಟ್ರಿಯನ್ ಡ್ರೆಸ್ಸೇಜ್‌ನಲ್ಲಿ ಸ್ವರ್ಣ ಗಳಿಸಿದರು.

ಸದ್ಯ ಭಾರತವು 3 ಚಿನ್ನ, 4 ಬೆಳ್ಳಿ, 6 ಕಂಚಿನ ಪದಕದೊಂದಿಗೆ 6ನೇ ಸ್ಥಾನ ಮುಟ್ಟಿದೆ. ಎರಡನೆಯ ದಿನದ ಕೊನೆಯಲ್ಲಿ ಕ್ರಮವಾಗಿ ಚಿನ್ನ ಬೆಳ್ಳಿ ಕಂಚು ಚೀನಾ 53- 29- 13= 95, ಪ್ರಜಾಸತ್ತಾತ್ಮಕ ಕೊರಿಯಾ 14- 16- 19 = 49, ಜಪಾನ್ 8- 20- 19= 47 ಮೊದಲ ಮೂರು ಸ್ಥಾನಗಳಲ್ಲಿ ಇವೆ. ಉಜ್ಬೆಕಿಸ್ತಾನ್, ಹಾಂಗ್‌ಕಾಂಗ್ ನಾಲ್ಕು, ಐದನೆಯ ಸ್ಥಾನಗಳಲ್ಲಿ ಇವೆ.