ಉಡುಪಿ, ನವೆಂಬರ್ 29:  ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ಉತ್ತಮ ಆಡಳಿತ ಮಾಸ (ಗುಡ್‍ ಗವರ್ನೆನ್ಸ್ ಮಂಥ್) 2022ರ ಅಂಗವಾಗಿ ಡಿಸೆಂಬರ್ ಮಾಹೆಯಲ್ಲಿ ವಿಶೇಷ ಆನ್‍ಲೈನ್‍ ಉಪನ್ಯಾಸ, ತಜ್ಞ ಸಮಿತಿ ಚರ್ಚೆ ಹಾಗೂ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ.

ಉತ್ತಮ ಆಡಳಿತಕ್ಕಾಗಿ ತಂತ್ರಜ್ಞಾನ ಎಂಬ ವಿಷಯದ ಕುರಿತು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಏರ್ಪಡಿಸಲಾಗಿದ್ದು ,ಡಿಸೆಂಬರ್ 15 ರ ಒಳಗೆ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು 500 ಪದಗಳಿಗೆ ಮೀರದಂತೆ ಇ-ಮೇಲ್ essay.ksta@gmail.com ಗೆ  ಪ್ರಬಂಧ ಬರೆದು ಕಳುಹಿಸಬಹುದಾಗಿದೆ ಎಂದು ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.