ಉಡುಪಿ: ಮೆಸ್ಕಾಂ ವಿಭಾಗದ ವತಿಯಿಂದ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ-2024 ರ ಅಂಗವಾಗಿ ಸಾರ್ವಜನಿಕರಿಗೆ ವಿದ್ಯುತ್ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮೆಸ್ಕಾಂ ಸಿಬ್ಬಂದಿಗಳು ಹಾಗೂ ವಾಹನ ಸಮೇತ ಜಾಥಾವು ಜುಲೈ 5 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 12.30 ರ ವರೆಗೆ ಮೆಸ್ಕಾಂ ಉಡುಪಿ ವಿಭಾಗೀಯ ಕಚೇರಿಯಿಂದ ಪ್ರಾರಂಭಗೊಂಡು ಮಿತ್ರ ನರ್ಸಿಂಗ್ ಹೋಂ-ಡಯಾನಾ ಸರ್ಕಲ್-ಕೆ.ಎಂ.ಮಾರ್ಗವಾಗಿ ಸರ್ವೀಸ್ ಬಸ್ ಸ್ಟ್ಯಾಂಡ್ ವರೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.