ಉಡುಪಿ, ನ 06: ಉಡುಪಿ ತಾಲೂಕಿನ ಪೌತಿ/ ವಾರಸು ಖಾತೆ ಅಂದೋಲನವು ನವೆಂಬರ್ 7 ರಂದು ಬೆಳಗ್ಗೆ 11 ಗಂಟೆಗೆ ನಗರದ ತಾಲೂಕು ಆಡಳಿತ ಸೌಧದಲ್ಲಿರುವ ತಾಲೂಕು ಕಛೇರಿಯ ಸಭಾಂಗಣದಲ್ಲಿ ನಡೆಯಲಿದೆ.

ಖಾತಾದಾರರು ಮರಣ ಹೊಂದಿದವರ ಮರಣ ಪ್ರಮಾಣ ಪತ್ರ( ದೃಡೀಕೃತ ಪ್ರತಿ) ವಂಶವೃಕ್ಷ ಹಾಗೂ ಸಂಬಂಧಪಟ್ಟ ಜಮೀನಿನ ಪಹಣಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಉಡುಪಿ ತಹಶೀಲ್ದಾರರ ಪ್ರಕಟಣೆ ತಿಳಿಸಿದೆ.