ಉಡುಪಿ: ಕರ್ನಾಟಕ ಪ್ರದೇಶ ಕೃಷಿಕ ಸಮಾಜದ 5 ವರ್ಷಗಳ ಅವಧಿಗೆ (2025-26 ರಿಂದ 2029-30 ರವರೆಗೆ), ಉಡುಪಿ ತಾಲೂಕು ಮಟ್ಟದ ಕೃಷಿಕ ಸಮಾಜದ ಚುನಾವಣೆಯನ್ನು ಡಿಸೆಂಬರ್ 15 ರಂದು ಉಡುಪಿಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಬೆಳಗ್ಗೆ 8 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಿಗಧಿಪಡಿಸಲಾಗಿದೆ.

ಸದರಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ಉಮೇದುದಾರರಿಗೆ ನವೆಂಬರ್ 30 ರಿಂದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಾಮಪತ್ರ ವಿತರಿಸಲಾಗುವುದು. ಆಕಾಂಕ್ಷಿಗಳು ಚುನಾವಣಾಧಿಕಾರಿಗಳಿಗೆ ಅರ್ಜಿ ಮೂಲಕ 250 ರೂ. ಗಳನ್ನು ಠೇವಣಿಯಾಗಿ ಪಾವತಿಸಿದ ಮೂಲ ರಶೀದಿ ಹಾಗೂ ಸಂಬಂಧಿಸಿದ ತಹಶೀಲ್ದಾರರಿಂದ ದೃಢೀಕೃತ ಪಹಣಿ ಪ್ರತಿಯೊಂದಿಗೆ ನಾಮಪತ್ರ ಸಲ್ಲಿಸಲು ಡಿಸೆಂಬರ್ 6 ಬೆಳಗ್ಗೆ 11 ರಿಂದ ಸಂಜೆ 5 ಕ್ಕೆ ಕೊನೆಯ ದಿನವಾಗಿದೆ ಎಂದು ಉಡುಪಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಹಾಗೂ ಉಡುಪಿ ತಾಲೂಕು ಕೃಷಿಕ ಸಮಾಜದ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.