ಮುಲ್ಕಿ: ಬಂಟರ ಸಂಘ ಮುಲ್ಕಿ ಯುವ ವಿಭಾಗ ಮತ್ತು ಮಹಿಳಾ ವಿಭಾಗ ವತಿಯಿಂದ ಯುಗಾದಿ ಸಂಭ್ರಮ (ಬಿಸು ಪರ್ಬ) ಆಚರಣೆ ಕಾರ್ಯಕ್ರಮ ಮುಲ್ಕಿ ಬಂಟರ ಸಂಘದ ಸಭಾಭವನದಲ್ಲಿ ಶುಕ್ರವಾರ ಬೆಳಿಗ್ಗೆಯ ಹೊತ್ತಿಗೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಪುರುಷೋತ್ತಮಶೆಟ್ಟಿ ವಹಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತಸರ ಮನೋಹರ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಭಾರತೀಯ ಪರಂಪರೆ ವಿಶ್ವದಲ್ಲಿ ಅತಿ ಶ್ರೇಷ್ಠವಾಗಿದ್ದು ಬಿಸು ಪರ್ಬದ ಆಚರಣೆಯ ಮೂಲಕ ಸಂಸ್ಕಾರ ಸಂಸ್ಕೃತಿ ಉಳಿಸುವ ಮುಲ್ಕಿ ಬಂಟರ ಸಂಘದ ಕಾರ್ಯ ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊತ್ತೇಸರ ಸಂತೋಷ್ ಕುಮಾರ್ ಹೆಗ್ಡೆ ಬಂಟರ ಸಂಘದ ಕಾರ್ಯದರ್ಶಿ ಗಂಗಾಧರ ಶೆಟ್ಟಿ ಬೆರ್ಕೆತೋಟ, ಕೋಶಾಧಿಕಾರಿ ಅಶೋಕ್ ಕುಮಾರ್ ಶೆಟ್ಟಿ,ಯುವ ವಿಭಾಗದ ದಾಮೋದರ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಚಂದ್ರ ಕಲಾ ಮತ್ತಿತರರು ಉಪಸ್ಥಿತರಿದ್ದರು. ಶರತ್ ಶೆಟ್ಟಿ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಸಾಯಿನಾಥ ಶೆಟ್ಟಿ ಧನ್ಯವಾದ ಅರ್ಪಿಸಿದರು.

ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ ಯುಗಾದಿ ಆಚರಣೆ ಬಗ್ಗೆ ಮಾತನಾಡಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ, ಬಿಸು ಪರ್ಬ ಭೋಜನಕೂಟ ನಡೆಯಿತು.